ಜೈನ ಮುನಿ ಹತ್ಯೆ ಖಂಡಿಸಿ ಮೌನ ಮೆರವಣಿಗೆ

JAIN MUNI PROTEST
Published on

ಹಳಿಯಾಳ: ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಖಂಡಿಸಿ ಪಟ್ಟಣದ ಜೈನ ಸಮುದಾಯದವರು ಗುರುವಾರ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪಟ್ಟಣದ ಶ್ರೀ ಗಣೇಶ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ ಜೈನ ಸಮುದಾಯದವರು, ವನಶ್ರೀ ಸರ್ಕಲ್, ಬಸ್ ನಿಲ್ದಾಣ ರಸ್ತೆ, ಮೇದಾರ ಗಲ್ಲಿ, ಅರ್ಬನ್ ಸರ್ಕಲ್, ಬಜಾರ್, ಮುಖ್ಯ ರಸ್ತೆ ಮತ್ತು ಶಿವಾಜಿ ಸರ್ಕಲ್ ಮೂಲಕ ಮೌನ ಪ್ರತಿಭಟನಾ ರ‍್ಯಾಲಿ ನಡೆಸಿ ಆಡಳಿತ ಸೌಧಕ್ಕೆ ಆಗಮಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್​ಗೆ ಸಲ್ಲಿಸಿದರು.

ಲೋಕ ಕಲ್ಯಾಣಕ್ಕೆ ತಮ್ಮ ಜೀವನ ತ್ಯಜಿಸಿರುವ ಜೈನಮುನಿಗಳ ರಕ್ಷಣೆಗೆ ವಿಶೇಷ ರಕ್ಷಣಾ ಪಡೆ ರಚಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಧರಣೇಂದ್ರ ದೊಡ್ಡಜೈನ್, ಪ್ರವೀಣ ಪಾಟೀಲ, ಚೇತನ ದೇಸಾಯಿ, ಅನಂತ ಶಿರಗಾಪೂರ, ಅನಿಲ ಜೈನ್, ಸಂದೇಶ ಪಾಟೀಲ, ಶ್ರೀಕಾಂತ ಅಂಗಡಿ, ಮಂಜುನಾಥ ಚಿಣಗಿ, ಶ್ರೇಣೀಕ ದೇಗನಳ್ಳಿ, ಶ್ರೀಧರ ಹೊಸಮನಿ, ಅಮಿತ ಪಂಡಿತ್, ಪ್ರದೀಪ ಅಂಬಿಪ್ಪಿ, ಸುನೀಲ ಇಟಗಿ, ಮನೋಜ ಚಿಣಗಿ, ಅಶೋಕ ಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net