ವಿವಿಧ ಸಂಘಟಣೆಗಳಿಂದ ಮೌನ ಮೆರವಣಿಗೆ

27-1
ಎಚ್.ಡಿ.ಕೋಟೆ ಕಾಶ್ಮೀರದ ಪಹಲ್ಗಾಮ್‌ನ ದಾಳಿಯನ್ನು ಖಂಡಿಸಿ ವಿವಿಧ ಸಂಘಟನೆಗಳ ಮುಖಂಡರು ಮೆರವಣಿಗೆ ನಡೆಸಿ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸಮಾವೇಶಗೊಂಡು ಆಕ್ರೋಶ ವ್ಯಕ್ತಪಡಿಸಿದರು.
Published on

ಎಚ್.ಡಿ.ಕೋಟೆ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಭೀಕರ ದಾಳಿ ಖಂಡಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದು ಪರಿಷತ್, ಬಜರಂಗದಳ, ಭಾರತೀಯ ಕಿಸಾನ್ ಸಂಘ, ಹಿಂದು ಜಾಗರಣ ವೇದಿಕೆ, ವನವಾಸಿ ಕಲ್ಯಾಣ, ವರ್ತಕರ ಸಂಘ ಮತ್ತು ಇತರ ಸಂಘಟನೆಗಳ ವತಿಯಿಂದ ಪಟ್ಟಣದ ಬಾಪೂಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ತಾಲೂಕು ಆಡಳಿತ ಸೌಧದವರೆಗೆ ಶುಕ್ರವಾರ ಮೌನ ಮೆರವಣಿಗೆ ನಡೆಸಿದರು.

ಪಟ್ಟಣದ ವರ್ತಕರ ಸಂಘದ ವತಿಯಿಂದ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಲಾಯಿತು.

ವಿಶ್ವ ಹಿಂದು ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಮಹದೇವಪ್ಪ ಮಾತನಾಡಿ, ಭಯೋತ್ಪಾದನೆ ಮೂಲಕ ಜನರನ್ನು ಘಾಸಿಗೊಳಿಸುತ್ತಿರುವ ಮತಾಂಧರು ಮತ್ತು ಅವರಿಗೆ ಬೆಂಬಲ ನೀಡುವವರಿಗೆ ತಕ್ಕಪಾಠ ಕಲಿಸಬೇಕಿದೆ ಎಂದರು.

ಭಯೋತ್ಪಾದಕರು ಹಿಂದುಗಳನ್ನು ಗುಂಡಿಟ್ಟು ಕೊಂದಿರುವ ಘಟನೆ ಅಮಾನವೀಯ. ಅದರಲ್ಲೂ ಕುಟುಂಬದವರ ಮುಂದೆಯೇ ಗುಂಡಿಟ್ಟು ಕೊಂದಿರುವುದು ಕ್ರೂರತನ ಎಂದು ಕಿಡಿಕಾರಿದರು.

ಉಗ್ರರ ದಾಳಿಗೆ 28 ಜನ ಮೃತರಾಗಿದ್ದು, ಅವರ ಆತ್ಮಕ್ಕೆ ಶಾಂತಿ ಇಡೀ ದೇಶವೇ ಸಲ್ಲಿಸುತ್ತಿದೆ. ಅವರ ಕುಟುಂಬದವರ ನೋವಿಗೆ ಸ್ಪಂದಿಸುವ ಕೆಲಸ ಇಡೀ ದೇಶ ಮಾಡುತ್ತಿದೆ ಎಂದರು.

ಕೇಂದ್ರ ಸರ್ಕಾರ ಭಯೋತ್ಪಾದಕರನ್ನು ಸಂಪೂರ್ಣ ನಿರ್ನಾಮ ಮಾಡುವ ಮೂಲಕ, ಇಂಥ ಕೃತ್ಯಗಳು ಮರುಕಳಿಸದಂತೆೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.

ಭಯೋತ್ಪಾದಕರ ವಿರುದ್ಧ ಕಠಣಿ ಕ್ರಮ ವಹಿಸುವಂತೆ ತಹಸೀಲ್ದಾರ್ ಶ್ರೀಧರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಬಿಜೆಪಿ ತಾಲೂಕು ಅಧ್ಯಕ್ಷ ಶಂಭೇಗೌಡ, ವೆಂಕಟಸ್ವಾಮಿ, ಮುಖಂಡರಾದ ಎಚ್.ಸಿ.ಲಕ್ಷ್ಮಣ, ಮೊತ್ತಬಸವರಾಜಪ್ಪ, ನಂದೀಶ್, ಶ್ರೀಕಾಂತ್, ಕೆಂಡಗಣ್ಣಸ್ವಾಮಿ, ಸಂತೋಷ್, ಪ್ರಶಾಂತ್, ಪ್ರಮೋದ್, ಚಂದ್ರಮೌಳಿ, ಗುರುಸ್ವಾಮಿ, ಮಹೇಶ್, ರೂಪೇಶ್, ಮಲ್ಲಿಕಾರ್ಜುನ್, ರವೀಂದ್ರ, ಬಿಡಗಲು ರಾಜು, ಸತೀಶ್, ಮಾದೇಶ್, ಬಸವರಾಜು, ಮಹದೇವಪ್ಪ, ಶಿವರಾಜು, ಸ್ವಾಮಿ, ಗೋವಿಂದರಾಜು, ಮಹದೇವಪ್ಪ, ಮಹದೇವನಾಯಕ, ರಾಕೇಶ್, ಸ್ವಾಮಿ ಸಂತೋಷ್ ಪ್ರಶಾಂತ್ ಪ್ರಮೋದ್, ರೂಪೇಶ್ ಮಲ್ಲಿಕಾರ್ಜುನ್, ರವೀಂದ್ರ, ಸತೀಶ್, ಮಾದೇಶ್, ಶಿವರಾಜು, ಶಿವರಾಜಪ್ಪ, ಕುಮಾರ್, ಪ್ರಕಾಶ್, ಚಂದ್ರಶೇಖರ್ ಟಿ.ವೆಂಕಟೇಶ್, ಪೃಥ್ವಿ ಕುಮಾರ್, ಪುಟ್ಟಸ್ವಾಮಿ, ಸಿದ್ದನಾಯಕ, ಮುತ್ತಣ್ಣ, ಸುಧಾಕರ್, ನಟರಾಜು, ಎಂ.ಸಿ.ದೊಡ್ಡನಾಯಕ, ಮಹೇಂದ್ರಣ್ಣ ಮೋಹನ್, ವಿನಯ್ ಭಜರಂಗಿ, ಗಿರಿಜಾ ದೊರೆಸ್ವಾಮಿ, ಮಂಜುಳಾ ಬಾಯಿ, ಲಲಿತ, ಸುರೇಶ್, ಗೋಪಾಲಯ್ಯ, ಚೆಲುವಯ್ಯ ಸಿದ್ದಯ್ಯ, ನಾರಾಯಣ್ ಲಾಲ್, ಪಪ್ಪು, ಮನೋಜ್‌ಗನ್ನ, ಅನಿಲ್ ಗನ್ನ, ರಾಜೇಶ್, ಜವರಯ್ಯ, ಸಂತೋಷ್, ಮಹದೇವಪ್ಪ, ವಿನೋದ್ ರಾವ್, ಸಂತು ಚಾಮರಾಜು, ನಾರಾಯಣ್ ಲಾಲ ಪಪ್ಪು, ರಾಕೇಶ್ ಶರ್ಮ, ರತನ್ ಸೇಟು, ನಾಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net