

ಆಲ್ದೂರು: ಕಾಶ್ಮೆರದಲ್ಲಿ ಹಿಂದುಗಳ ಮೇಲಿನ ದಾಳಿ ಖಂಡಿಸಿ ಮಸ್ಲಿಂ ಸಮಾಜದಿಂದ ಬೃಹತ್ ಮೌನ ಮೆರವಣಿಗೆ ನಡೆಸಲಾಯಿತು.
ಗ್ರಾಪಂ ಮಾಜಿ ಸದಸ್ಯ ಅಶ್ರ್ ಮಾತನಾಡಿ, ನಮ್ಮ ದೇಶ, ನಮ್ಮ ಮಣ್ಣಿಗೆ ಚಿರಋಣಿಯಾಗಿರುವಂತ ಕೆಲಸವನ್ನು ನಮ್ಮ ಸಮಾಜ ಮಾಡಿಕೊಂಡು ಬಂದಿದೆ. ಪಾಕಿಸ್ತಾನದ ಸಹಕಾರವಿಲ್ಲದೆ ಉಗ್ರರು ನಮ್ಮ ದೇಶದ ಒಳಗೆ ಪ್ರವೇಶ ಮಾಡಲು ಸಾಧ್ಯವಿಲ್ಲ. ಪಾಕಿಸ್ತಾನದ ಕುಮ್ಮಕ್ಕಿನಿಂದ ಇಂತಹ ಘೋರ ಘಟನೆ ನಡೆದಿದೆ .ಇದನ್ನು ನಮ್ಮ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕಾಶ್ಮೆರದಲ್ಲಿ ಹಿಂದುಗಳ ಜತೆಗೆ ಮುಸ್ಲಿಂ ಯುವಕನನ್ನು ಹತ್ಯೆ ಮಾಡಲಾಗಿದೆ. ಈ ಕೃತ್ಯವನ್ನು ನಮ್ಮ ಸಮಾಜ ಒಪ್ಪುವುದಿಲ್ಲ. ಇವರಿಗೆ ತಕ್ಕ ಪಾಠ ಕಲಿಸಬೇಕು. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಉಗ್ರರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಅಶ್ರ್, ನೂರ್‌ಅಹಮದ್, ಮುಕ್ತಾರ್‌ಅಹಮದ್, ಾರುಕ್, ಆಸ್ೀ ಅಲಿ, ಪಟ್ಟಣದ ಮದೀನ ಮಸೀದಿ, ಜಾಮೀಯಾ ಮಸೀದಿ, ಕರಾರ್ ಹುಲ್‌ಹಕ್ ಮಸೀದಿ, ಖುಬಾ ಮಸೀದಿ ಅಧ್ಯಕ್ಷರು, ಸದಸ್ಯರು, ಮೌಲಾನಗಳು ಭಾಗವಹಿಸಿದ್ದರು.