

ಬೆಳಗಾವಿ: ಸರ್ಕಾರ ಮರಾಠಾ ಸಮಾಜಕ್ಕೆ ಸೂಕ್ತ ಮೀಸಲಾತಿ ನೀಡುವಂತೆ ಆಗ್ರಹಿಸಿ ಮುಂಬೈನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಮನೋಜ ಪಾಟೀಲ ಹೋರಾಟ ಬೆಂಬಲಿಸಿ, ನಗರದಲ್ಲಿ ಭಾನುವಾರ ಮರಾಠಾ ಸಮಾಜದಿಂದ ಮೌನ ಮೆರವಣಿಗೆ ನಡೆಸಲಾಯಿತು.
ಶಹಾಪುರ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದಲ್ಲಿನ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಯಾವುದೇ ೂಷಣೆಗಳಿಲ್ಲದೇ, ಕೈಯಲ್ಲಿ ತಮ್ಮ ಬೇಡಿಕೆಗಳ ಕುರಿತಾದ ಫಲಕಗಳನ್ನು ಹಿಡಿದು ಮೌನವಾಗಿ ಸಾಗಿದರು.
ಎಸ್ಪಿಎಂ ರಸ್ತೆ, ಕಪಿಲೇಶ್ವರ ರೇಲ್ವೆ ಮೇಲ್ಸೇತುವೆ, ಹೇಮು ಕಲಾನಿ ಚೌಕ್, ರಾಮಲಿಂಗಖಿಂಡ್ ಗಲ್ಲಿ ಮಾರ್ಗವಾಗಿ ಸಂಚರಿಸಿ ಬೋಗಾರವೇಸ್ದಲ್ಲಿನ ಧರ್ಮವೀರ ಸಂಭಾಜಿ ವೃತ್ತದಲ್ಲಿ ಮೆರವಣಿಗೆ ಅಂತ್ಯಗೊಳಿಸಿದರು. ಪ್ರಕಾಶ ಮುರಾಳೆ, ರಮಾಕಾಂತ ಕೊಂಡಸ್ಕರ, ಸಾಗರ ಪಾಟೀಲ, ಅಮರ ಯಳ್ಳೂರಕರ, ಇತರರಿದ್ದರು.