ಪ್ಯಾಸ್ ಫೌಂಡೇಶನ್‌ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ

IMG20241121204349.jpg
Published on

ಬೆಳಗಾವಿ: ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ (ಕಾಹೆರ್), ಪರಿಸರ ಸುಸ್ಥಿರತೆ ಮತ್ತು ವಿಸ್ತರಣಾ ಚಟುವಟಿಕೆಗಳ ಸಹಯೋಗಕ್ಕಾಗಿ ಗುರುವಾರ ಬೆಳಗಾವಿಯ ಪ್ಯಾಸ್ ಫೌಂಡೇಶನ್‌ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಮಾಡಲಾಯಿತು.

ಮಾನವನ ಆರೋಗ್ಯ ಮತ್ತು ಪರಿಸರದ ರಕ್ಷಣೆಗೆ ಕೊಡುಗೆ ನೀಡುವ ಪರಿಸರ ಅಭಿವೃದ್ಧಿ, ಸುಸ್ಥಿರ ಮತ್ತು ಸಮಗ್ರ ನಿರ್ವಹಣಾ ನಿರ್ದಿಷ್ಟ ಚಟುವಟಿಕೆಗಳನ್ನು ಕೈಗೊಳ್ಳಲು, ಉತ್ತೇಜಿಸಲು ಸಹಕರಿಸುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ. ಭಾರತದ ಜೀವವೈವಿಧ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ವಿಕಸಿತ ಭಾರತವನ್ನು ಅಭಿವೃದ್ಧಿಪಡಿಸುವಲ್ಲಿ ಕೈಜೋಡಿಸಲು ಇದು ಸಹಾಯ ಮಾಡುತ್ತದೆ. ಕಾಹೆರ್‌ನ ಪರವಾಗಿ ಕುಲಸಚಿವ ಡಾ. ಎಂ.ಎಸ್. ಗಣಾಚಾರಿ, ಬೆಳಗಾವಿಯ ಪ್ಯಾಸ್ ಫೌಂಡೇಶನ್ ಪರವಾಗಿ ಕಾರ್ಯದರ್ಶಿ ಡಾ. ಪ್ರೀತಿ ಕೋರೆ ಅವರು ಕಾಹೆರ್‌ನ ಉಪಕುಲಪತಿ ಡಾ. ನಿತಿತ್ ಗಂಗನೆ ಅವರ ಉಪಸ್ಥಿತಿಯಲ್ಲಿ ಎಂಒಯುಗೆ ಸಹಿ ಹಾಕಿ, ವಿನಿಮಯ ಮಾಡಿಕೊಂಡರು.

ಅಭಿಮನ್ಯು ಡಾಗಾ ಅಧ್ಯಕ್ಷ ಮಾಧವ ಪ್ರಭು, ಉಪಾಧ್ಯಕ್ಷ ಲಕ್ಷ್ಮೀಕಾಂತ ಪಸಾರಿ, ಖಜಾಂಚಿ ದೀಪಕ ಔಲ್ಕರ್, ಪ್ಯಾಸ್ ಫೌಂಡೇಶನ್‌ನ ರೋಹನ್ ಕುಲಕರ್ಣಿ, ಸೂರ್ಯಕಾಂತ ಹಿಂಡಲಗೇಕರ, ಐಕ್ಯೂಎಸಿ ನಿರ್ದೇಶಕಿ ಡಾ. ಸೀಮಾ ಹಳ್ಳಿಕೇರಿಮಠ ಮತ್ತು ಕಾಹೆರ್ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕಿ ಡಾ. ಅಶ್ವಿನಿ ನರಸಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net