ನಿರಂತರ ಪ್ರಯತ್ನದಿಂದ ಗಮನಾರ್ಹ ಅಭಿವೃದ್ಧಿ

Mul_Kalusanka
Published on

ಮೂಲ್ಕಿ: ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ಒದಗಿಸಲು ನಿರಂತರ ಪ್ರಯತ್ನದ ಕಾರಣ ಅಭಿವದ್ಧಿ ಕಾರ್ಯ ಉತ್ತಮವಾಗಿ ನಡೆಯುತ್ತಿದೆ ಎಂದು ಶಾಸಕ ಉವಾನಾಥ ಕೋಟ್ಯಾನ್ ಹೇಳಿದರು.

ಪಡುಪಣಂಬೂರು ತೈತೋಟದ ಸಮೀಪ ಸುವಾರು 14 ಲಕ್ಷ ರೂ. ವೆಚ್ಚದ ಕಾಲುಸಂಕ ನಿರ್ವಾಣಕ್ಕೆ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಿ ವಾತನಾಡಿದರು.

ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುವಾ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.

ಪಂಚಾಯಿತಿ ಉಪಾಧ್ಯಕ್ಷ ಹೇಮನಾಥ ಅಮೀನ್, ಸದಸ್ಯ ವಿನೋದ್ ಸಾಲ್ಯಾನ್ ಬೆಳ್ಳಾಯರು, ತಾ.ಪಂ. ವಾಜಿ ಸದಸ್ಯೆ ಸಾವಿತ್ರಿ ಸುವರ್ಣ, ಬಿಜೆಪಿ ನಾಯಕರಾದ ಲಕ್ಷ್ಮಣ ಸಾಲ್ಯಾನ್, ಶ್ಯಾಮ್ ಪ್ರಸಾದ್, ದಿವ್ಯೇಶ್ ದೇವಾಡಿಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧೀರ್, ಗುತ್ತಿಗೆದಾರ ಮಹಮದ್ ಇವ್ರಾನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net