ಸಹಿ ರೀ ಸಹಿ ಪ್ರದರ್ಶನ 16ರಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿಯ ಗುರು ಇನ್​ಸ್ಟಿಟ್ಯೂಟ್​ ವತಿಯಿಂದ ಸಹೀ ರೀ ಸಹಿ ನಾಟಕವನ್ನು ಸೆ. 16ರಂದು ಸಂಜೆ 6.30ಕ್ಕೆ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಪ್ರದಶಿರ್ಸಲಾಗುವುದು.
ಡಾ. ಯಶವಂತ ಸರದೇಶಪಾಂಡೆ ಕನ್ನಡಕ್ಕೆ ಅನುವಾದಿಸಿ, ನಿರ್ದೇಶಿಸಿ ನಾಲ್ಕು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅವಳಿ ನಗರದ ಕಲಾವಿದರಾದ ರವಿ ಕುಲಕರ್ಣಿ, ಶಿಲ್ಪಾ ಪಾಂಡೆ, ಪ್ರಿಯಾ ಕುಲಕರ್ಣಿ, ಪ್ರದೀಪ ಮುಧೋಳ, ಕೃಷ್ಣಮೂರ್ತಿ ಗಾಂವಕರ್​, ಅರ್ಪಿತಾ, ಬಿ, ಅರವಿಂದ ಪಾಟೀಲ ನಟಿಸಿದ್ದಾರೆ.
ಗಂಗಾವತಿ ರೇಷ್ಮೆ ರಂಗೋತ್ಸವ-24 ನಿಮಿತ್ತ ಈ ಪ್ರದರ್ಶನ ಏರ್ಪಡಿಸಿದ್ದು, ಈಗಾಗಲೇ ಮುಧೋಳ, ಲೋಕಾಪುರ, ಬಾಗಲಕೋಟೆ, ಹುಬ್ಬಳ್ಳಿ ಸೇರಿ ವಿವಿಧ ಕಡೆಗಳಲ್ಲಿ ಪ್ರದರ್ಶನ ಕಂಡಿದೆ. ಮೂಲ ಮರಾಠಿಯೊಳಗ ಕೇದಾರ ಶಿಂಧೆ ರಚಿಸಿದ ಈ ನಾಟಕ ರಾಜ್ಯದ ವಿವಿಧ ನಗರಗಳಲ್ಲಿ ಪ್ರದರ್ಶನಗೊಂಡಿದೆ. ಸೆ. 16ರ ಪ್ರದರ್ಶನ ವೀಕ್ಷಿಸಲು ಆಗಮಿಸುವ ಜನರಲ್ಲಿ ಅದೃಷ್ಟವಂತ ಪ್ರೇಕ್ಷಕರನ್ನು ಆಯ್ಕೆ ಮಾಡಿ ಗಂಗಾವತಿ ಸಿಲ್ಕ್​ ಪ್ಯಾಲೇಸ್​ ವತಿಯಿಂದ ರೇಷ್ಮೆ ಸೀರೆ ಉಡುಗರೆಯಾಗಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net