ಸ್ವೀಪ್ ಸಮಿತಿ ವತಿಯಿಂದ ಸಹಿ ಅಭಿಯಾನ

02arsph1ep
ಅರಸೀಕೆರೆ ನಗರಸಭೆ ಕಚೇರಿ ಆವರಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಸಹಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ರುಖಿಯಾ ಬೇಗಂ, ಬಸವರಾಜ್, ಸುದರ್ಶನ್, ರಾಜಶೇಖರ್, ರಾಜೇಶ್, ನರೇಂದ್ರ ಕುಮಾರ್ ಇತರರಿದ್ದರು.
Published on

ಅರಸೀಕೆರೆ: ಮತದಾನ ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಅರ್ಹರು ತಪ್ಪದೇ ಮತದಾನ ಮಾಡಬೇಕು ಎಂದು ತಹಸೀಲ್ದಾರ್ ರುಖಿಯಾ ಬೇಗಂ ಹೇಳಿದರು.

ನಗರಸಭೆ ಕಚೇರಿ ಆವರಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಹಿ ಅಭಿಯಾನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಸಲು ಆಯೋಗ ಅಧಿಸೂಚನೆ ಹೊರಡಿಸಿದೆ. ಏ.26ರಂದು ಜಿಲ್ಲೆಯ ಲೋಕಸಭಾ ಸ್ಥಾನಕ್ಕೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ದೇಶದ ದೊಡ್ಡ ಹಬ್ಬವೆಂದೇ ಪರಿಗಣಿತವಾಗಿರುವ ಪ್ರಕ್ರಿಯೆಯಲ್ಲಿ ಅರ್ಹರು ಮನೆಯಲ್ಲಿ ಉಳಿದುಕೊಳ್ಳದೇ ತಮ್ಮ ಹಕ್ಕು ಚಲಾಯಿಸಬೇಕು ಎಂದು ಕರೆ ನೀಡಿದರು.

ಪೌರಾಯಕ್ತ ಬಸವರಾಜ್ ಮಾತನಾಡಿದರು. ತಾಪಂ ಇಒ ಸುದರ್ಶನ್, ಸಹಾಯಕ ಚುನಾವಣಾಧಿಕಾರಿ ಅರುಣ್ ಕುಮಾರ್ ಸಂಘಾವಿ, ನಗರಸಭೆಯ ಸಮುದಾಯ ಸಂಘಟಕ ರಾಜಶೇಖರ್, ಎಫ್‌ಡಿಎ ಅನಿತಾ, ಕಂದಾಯ ಅಧಿಕಾರಿ ರಾಜೇಶ್, ನಿರೀಕ್ಷಕ ನರೇಂದ್ರ ಕುಮಾರ್, ಸುಮಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net