ಜನರ ವಿಶ್ವಾಸಗಳಿಸಿದ ಸಿಗ್ಮಾ ಆಸ್ಪತ್ರೆ: ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಎಸ್.ಜ್ಞಾನಶಂಕರ್ ಅಭಿಮತ

14
Published on

ಮೈಸೂರು: ಶ್ರದ್ಧೆಯಿಂದ ರೋಗಿಗಳ ಸೇವೆ ಮಾಡುತ್ತಿರುವುದರಿಂದ ಸಿಗ್ಮಾ ಆಸ್ಪತ್ರೆ ಜನರ ವಿಶ್ವಾಸಗಳಿಸಿದೆ ಎಂದು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಎಸ್.ಜ್ಞಾನಶಂಕರ್ ಹೇಳಿದರು.

ವೈದ್ಯರ ದಿನಾಚರಣೆ ಅಂಗವಾಗಿ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು, ಆಸ್ಪತ್ರೆಯ ಎಲ್ಲ ವೈದ್ಯರಿಗೆ ಶುಭ ಕೋರಿದರು.

ನಮ್ಮ ಆಸ್ಪತ್ರೆಯಲ್ಲಿ ವೈದ್ಯೋನಾರಾಯಣ ಹರಿ ಎಂಬಂತೆ ನಮ್ಮ ವೈದ್ಯರೂ ಶ್ರಮದಿಂದ ರೋಗಿಗಳಿಗೆ ಶ್ರದ್ಧೆ, ಅನುಕಂಪದಿಂದ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ನಮ್ಮ ಆಸ್ಪತ್ರೆ ವೈದ್ಯರ ವಿಶೇಷತೆ, ಪ್ರೀತಿಗೆ ಪಾತ್ರವಾಗಿದೆ ಎಂದರು.

ರೋಗಿಯ ಸಹಾಯಕ ರಮೇಶ್ ಮಾತನಾಡಿ, ನಾವು ಕಳೆದ ಎರಡು ತಿಂಗಳಿನಿಂದ ಸಿಗ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಗುಣಮುಖರಾಗಿದ್ದೇವೆ. ಡಾ.ಮಾದಪ್ಪ ಮತ್ತು ಅವರ ತಂಡ ವೈದ್ಯರು ಶ್ರದ್ಧೆಯಿಂದ ಚಿಕಿತ್ಸೆ ನೀಡಿ ಗುಣ ಮಾಡಿದ್ದಾರೆ. ಇದಕ್ಕೆ ಡಾ. ಮಾದಪ್ಪ ಮತ್ತು ತಂಡಕ್ಕೆ ಧನ್ಯವಾದ ಸಲ್ಲಿಸುವಾಗಿ ಹೇಳಿದರು.

ಪೆಥಾಲಜಿಸ್ಟ್ ಡಾ. ಶ್ರೀದೇವಿ ಅವರು, ಈ ಆಸ್ಪತ್ರೆಯಲ್ಲಿ ಎಲ್ಲರೂ ಒಂದೇ ಟೀಮ್ ಆಗಿ ಕೆಲಸ ಮಾಡುತ್ತಿರುವುದರಿಂದ ಎಲ್ಲ ವೈದರಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಯಾಗಿದೆ ಎಂದರು.

ನೆಫ್ರೋಲಜಿಸ್ಟ್ ಡಾ ಅನಿಕೇತ್ ಪ್ರಭಾಕರ್ ಮಾತನಾಡಿ, ನಾವು ವರ್ಷವಿಡಿ ರೋಗಿಗಳ ಸೇವೆಯನ್ನು ದಿನಾಚರಣೆಯ ರೂಪದಲ್ಲಿ ಮಾಡುತ್ತಾ ಬಂದಿದ್ದೇವೆ. ಈಗ ಎಲ್ಲರೂ ವರ್ಷಕ್ಕೆ ಒಂದು ದಿನ ವೈದ್ಯರ ದಿನಾಚರಣೆ ಮಾಡಿ ಶುಭ ಕೋರುತ್ತಿರುವುದು ತುಂಬಾ ಸಂತೋಷವಾಗಿದೆ ಎಂದರು.

ಡಿ.ದೇವರಾಜ ಅರಸು ರಸ್ತೆಯ ಕೋಟಕ್ ಬ್ಯಾಂಕ್‌ನ ಮ್ಯಾನೇಜರ್ ಮಹೇಂದ್ರ ಅವರು, ಆಸ್ಪತ್ರೆಯ ಡಾ ಅನಿಕೇತ್ ಪ್ರಭಾಕರ್, ಡಾ. ಡಿ.ಎನ್. ಸೋಮಣ್ಣ, ಡಾ. ಶ್ರೀದೇವಿ, ಡಾ.ಲೀಲಾವತಿ ಅವರನ್ನು ಸನ್ಮಾನಿಸಿ ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net