ರಟ್ಟಿಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ

Siege of raith sampark kendra
Published on

ರಟ್ಟಿಹಳ್ಳಿ: ಬೆಳೆ ಹಾನಿ ಅರ್ಜಿ ಸ್ವೀಕರಿಸದ ಹಿನ್ನೆಲೆಯಲ್ಲಿ ರೈತರು ಪಟ್ಟಣದ ರೈತ ಸಂರ್ಪಕ ಕೇಂದ್ರಕ್ಕೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಅತಿವೃಷ್ಟಿಯಿಂದ ಹಾಗೂ ನದಿ, ಕೆರೆಗಳು, ಕಾಲುವೆಗಳ ಹೆಚ್ಚಿನ ನೀರಿನ ಹರಿವಿನಿಂದ ಬೆಳೆಗಳು ಹಾನಿಯಾಗಿವೆ. ಸರ್ಕಾರ ಬೆಳೆ ಹಾನಿ ಅರ್ಜಿ ಪಡೆಯಲು ಕೊನೆಯ ದಿನಾಂಕ ತಿಳಿಸಿಲ್ಲ. ಆದರೂ, ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ಆ. 23 ಕೊನೆಯ ದಿನಾಂಕ ಎಂದು ಫಲಕ ಹಾಕಲಾಗಿದೆ. ಯಾವುದೇ ನಿರ್ಬಂಧ ಹಾಕದೇ ಬೆಳೆ ಹಾನಿಯಾಗಿರುವ ರೈತರಿಂದ ಅರ್ಜಿ ಸ್ವೀಕರಿಸಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಕೆ.ಗುರುಬಸವರಾಜ ಮತ್ತು ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರ ಮತ್ತು ಕೃಷಿ ಅಧಿಕಾರಿ ಜಿ.ಎಂ. ಬತ್ತಿಕೊಪ್ಪ ರೈತರೊಂದಿಗೆ ರ್ಚಚಿಸಿ, ಮೇಲಧಿಕಾರಿಗಳ ನಿರ್ದೇನದಂತೆ ದಿನಾಂಕ ಅಂತಿಮಗೊಳಿಸಲಾಗಿದೆ. ರೈತರ ಒತ್ತಾಯದ ಮೇರೆಗೆ ಆ. 31ರವರೆಗೆ ಬೆಳೆ ಹಾನಿ ಅರ್ಜಿ ಸ್ವೀಕರಿಸಲಾಗುವುದು ಎಂದು ತಿಳಿಸಿದರು. ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು.

ರೈತ ಸಂಘದ ತಾಲೂಕು ಅಧ್ಯಕ್ಷ ಶಂಕರಗೌಡ ಶಿರಗಂಬಿ, ಗೌರವಾಧ್ಯಕ್ಷ ಬಸನಗೌಡ ಗಂಗಪ್ಪಳವರ, ಮಲ್ಲನಗೌಡ ಮಾಳಗಿ, ಜಗದೀಶ ಮೂಲಿಮನಿ, ಶಂಭು ಮುತ್ತಗಿ, ಮಲ್ಲೇಶಪ್ಪ ಸಿದ್ದಗೇರಿ, ಉಜಿನೆಪ್ಪ ಕೋಡಿಹಳ್ಳಿ, ಚೆನ್ನಗೌಡ ಪೊಲೀಸ್​ಗೌಡ್ರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net