

ಹಾವೇರಿ: ಸೈಡ್ ಇನ್ಕಮ್ ಅಪಾರ್ರ್ಚುನಿಟಿ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ವೆಬ್ಲಿಂಕ್ಅನ್ನು ಕಳುಹಿಸಿ 2.90 ಲಕ್ಷ ರೂ. ವಂಚಿಸಿದ ಕುರಿತು ಇಲ್ಲಿಯ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ವಿನಾಯಕ ವಾಸಪ್ಪ ಹೆಗಡೆ (27) ಎಂಬುವರಿಗೆ ಮೋಸ ಮಾಡಿರುವುದು.
ಇವರ ವಾಟ್ಸಅಪ್ಗೆ ವೆಬ್ಲಿಂಕ್ವೊಂದನ್ನು ಕಳುಹಿಸಿದ ಅಪರಿಚಿತ ವ್ಯಕ್ತಿ ನಮ್ಮಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡಲಾಗುವುದು ಎಂದು ನಂಬಿಸಿದ್ದಾನೆ. ಮೊದಲಿಗೆ 10 ಸಾವಿರ ರೂ. ಹಾಕಿಸಿಕೊಂಡು ಅದಕ್ಕೆ 906 ರೂ. ಲಾಭ ನೀಡಿದ್ದಾನೆ. ನಂತರ 2.90 ಲಕ್ಷ ರೂ. ಹಾಕಿಸಿಕೊಂಡು ಲಾಭಾಂಶ ಹಾಗೂ ನೀಡಿದ ಹಣ ಸಹ ಕೊಡದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.