ಅತಿಯಾದ ಯೂರಿಯಾ ಬಳಕೆಯಿಂದ ದುಷ್ಪರಿಣಾಮ

30 Dwd 6 Manjunath Antaravalli
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಯೂರಿಯಾ ಗೊಬ್ಬರದ ಅತಿಯಾದ ಬಳಕೆ ಹಾನಿಕಾರಕ. ಇದರಿಂದ ಬೆಳೆ ಮತ್ತು ಮಣ್ಣಿನ ಮೇಲೆ ಋಣಾತ್ಮಕ ಪರಿಣಾಮವಾಗುತ್ತದೆ. ಯೂರಿಯಾ ಮಣ್ಣಿನಲ್ಲಿ ಹೈಡ್ರಾಲಿಸಿಸ್ ಆಗಿ ಅಮೋನಿಯಾ ಬಿಡುಗಡೆ ಮಾಡುತ್ತದೆ. ಇದು ಬೀಜ ಮತ್ತು ಬೇರುಗಳಿಗೆ ಹಾನಿಕಾರಕ. ಮಣ್ಣಿನ ಫಲವತ್ತತೆ ಕ್ರಮೇಣ ಕಡಿಮೆಯಾಗಬಹುದು. ಪರಿಸರ ಮಾಲಿನ್ಯ ಉಂಟಾಗಬಹುದು.

ಸಸ್ಯ ಬೆಳವಣಿಗೆ ಹೆಚ್ಚಾಗಿ ಬೆಳೆಗಳಲ್ಲಿ ರಸ ಹೀರುವ ಕೀಟ ಹಾಗೂ ರೋಗ ಭಾಧೆ ಹೆಚ್ಚುತ್ತದೆ. ಸಸಿಗಳು ಗಟ್ಟಿಯಾಗಿ ನಿಲ್ಲುವ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಯೂರಿಯಾ ಮಣ್ಣಿನಲ್ಲಿ ಕರಗಿದಾಗ ಅಮೋನಿಯಾ ಅನಿಲವಾಗಿ ಗಾಳಿಯಲ್ಲಿ ಬಿಡುಗಡೆಯಾಗಿ ಹೆಚ್ಚು ಸಾರಜನಕಾಂಶ ಸಂಗ್ರಹವಾಗಬಹುದು. ಇದು ನೀರು ಮತ್ತು ವಾಯುಮಾಲಿನ್ಯಕ್ಕೆ ಕಾರಣವಾಗಿ ವಾತಾವರಣವನ್ನು ಕಲುಷಿತಗೊಳಿಸುತ್ತದೆ. ಆದ್ದರಿಂದ ಯೂರಿಯಾ ಗೊಬ್ಬರವನ್ನು ಎಚ್ಚರಿಕೆಯಿಂದ ಮತ್ತು ಶಿಫಾರಸು ಮಾಡಿದ ಪ್ರಮಾಣದಲ್ಲಿ ಬಳಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net