ಸಿದ್ದು ಅವರದ್ದು ಸಾಮಾಜಿಕ ನ್ಯಾಯದ ಭ್ರಾಂತಿ

Vishwanath
Published on

ಮೈಸೂರು: ದೇವರಾಜ ಅರಸು ಅವರಂತೆ ಸಾಮಾಜಿಕ ನ್ಯಾಯದ ಹರಿಕಾರ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ ಆದರೆ ಅರಸು ಅವರದ್ದು ಕ್ರಾಂತಿಯಾದರೆ, ಸಿದ್ದರಾಮಯ್ಯ ಅವರದ್ದು ಸಾಮಾಜಿಕ ನ್ಯಾಯದ ಭ್ರಾಂತಿ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಟೀಕಿಸಿದರು.
ಈಗಿನ ರಾಜಕಾರಣಿಗಳಿಗೆ ಸಾರ್ವಜನಿಕರ ಹಿತಾಸಕ್ತಿಗಿಂತ ಕೌಟುಂಬಿಕ ಹಿತಾಸಕ್ತಿ ಹೆಚ್ಚಾಗಿದೆ. ನಾಡಿನ ಅಭಿವೃದ್ಧಿಯ ದೂರದೃಷ್ಟಿಯನ್ನು ಇಟ್ಟುಕೊಂಡು ಆಳುತ್ತಿಲ್ಲ. ಬದಲಾಗಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸುತ್ತಿರುತ್ತಾರೆ. ಡಿ.ದೇವರಾಜ ಅರಸು ಅಂತಹವರು ನಮ್ಮಂತಹವರನ್ನು ಬೆಳೆಸಿದರು. ನಾವು ಮಾತ್ರ ನಮ್ಮ ಮಕ್ಕಳನ್ನು ಮುಂದೆ ತರಲು ಪ್ರಯತಿಸುತ್ತಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಮಾರಸ್ವಾಮಿ, ಯಡಿಯೂರಪ್ಪ, ಸಿದ್ದರಾಮಯ್ಯ ಅವರಿಗೆ ತಮ್ಮ ಮಕ್ಕಳ ಅಭಿವೃದ್ಧಿ ಹಾಗೂ ಭವಿಷ್ಯವೇ ಮುಖ್ಯವಾಗಿದೆ. ನಾಡಿನ ಅಭಿವೃದ್ಧಿ ಬೇಕಾಗಿಲ್ಲ. ಇದು ಹೀಗೆ ಮುಂದುವರಿದರೆ ಗೇಲಿಗೆ ಒಳಗಾಗಬೇಕಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net