ಕಟ್ಟಿನಮನೆಯಲ್ಲಿ ಸಿದ್ಧಿ ವಿನಾಯಕಸ್ವಾಮಿ ರಥೋತ್ಸವ

nrp ratha
ಎನ್.ಆರ್.ಪುರ ತಾಲೂಕು ಕಟ್ಟಿನಮನೆ ಶ್ರೀ ಸಿದ್ಧಿ ವಿನಾಯಕಸ್ವಾಮಿ ರಥೋತ್ಸವ ನಡೆಯಿತು.
Published on

ಎನ್.ಆರ್.ಪುರ: ಕಟ್ಟಿನಮನೆ ಶ್ರೀ ಸಿದ್ಧಿ ವಿನಾಯಕಸ್ವಾಮಿ ರಥೋತ್ಸವ ಮಂಗಳವಾರದಿಂದ ಶುಕ್ರವಾರದವರೆಗೆ ಸಂಭ್ರಮದಿಂದ ನಡೆಯಿತು.

ಮಂಗಳವಾರ ಧ್ವಜಾರೋಹಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ರಥೋತ್ಸವ ಕಾರ್ಯಕ್ರಮ ಪ್ರಾರಂಭವಾಯಿತು. ಬುಧವಾರ ಕಲಶ ಸ್ಥಾಪನೆ, ಮೂಡುಗಣಪತಿ, ಗಣ ಹೋಮ, ರಾತ್ರಿ ರಂಗೋತ್ಸವ, ಪಲ್ಲಕ್ಕಿ ಉತ್ಸವ ನಡೆಯಿತು. ಗುರುವಾರ ಪ್ರಧಾನ ಗಣಹೋಮ, ಮಧ್ಯಾಹ್ನ ಹಾಗೂ ರಾತ್ರಿ ರಥೋತ್ಸವ ನಡೆಯಿತು. ನಂತರ ಅಷ್ಟಾವಧಾನ ಸೇವೆ ನಡೆಯಿತು. ಶುಕ್ರವಾರ ಅವಭೃತ ಸ್ನಾನ, ಸತ್ಯಗಣಪತಿ ವೃತ ನಡೆಯಿತು. 4 ದಿನಗಳ ಕಾಲ ನಡೆದ ರಥೋತ್ಸವದಲ್ಲಿ ಪ್ರತಿ ದಿನ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಮುಡಿಗಂಧ ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net