

ವಿಜಯಪುರ : ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯತೆಯ ಶ್ರೀ ಸಿದ್ಧೇಶ್ವರ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಕಗ್ಗೋಡದ ಗೋರಾ ಕೇಂದ್ರದಲ್ಲಿ ಹಿಂದುಗಳು ಪೂಜ್ಯ ಭಾವನೆದಿಂದ ಕಾಣುವ ಸಾವಿರಾರು ಗೋವುಗಳನ್ನು ಭಕ್ತಿಯಿಂದ ಸಾಕಿ ಸಲಹುತ್ತಿದ್ದು, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಶ್ರೀ ಸಿದ್ಧೇಶ್ವರ ಸಂಸ್ಥೆ ಆಡಳಿತ ಮಂಡಳಿ ಹೇಳಿದೆ.
ಸಿದ್ಧೇಶ್ವರ ಸಂಸ್ಥೆಯ ಆಡಳಿತ ಮಂಡಳಿ ಒಂದು ಸಾಮಾಜಿಕ, ಧಾರ್ಮಿಕ ಹಾಗೂ ಶೈಣಿಕ ಸಂಸ್ಥೆಯಾಗಿದೆ. ನಗರ ಶಾಸಕ ಯತ್ನಾಳ ಸೇರಿದಂತೆ ಹಲವರು ದಾನ ಮಾಡಿದ ಜಾಗದಲ್ಲಿ ಗೋವುಗಳ ರಣೆಯ ಪವಿತ್ರ ಕಾರ್ಯಕ್ಕಾಗಿ ಗೋರಾ ಕೇಂದ್ರ ಆರಂಭಿಸಲಾಗಿದೆ. ಮೇವು, ಹಿಂಡಿ ಸೇರಿದಂತೆ ನಿರ್ವಹಣೆಗಾಗಿ ನಿರಂತರವಾಗಿ ಹಲವು ದಾನಿಗಳು ದಾನ ಮಾಡುತ್ತಿದ್ದು, ಅದರಿಂದ ವ್ಯವಸ್ಥಿತವಾಗಿ ಸಾವಿರಾರು ಗೋವುಗಳ ಪೋಷಣೆ ಕಾರ್ಯ ನಡೆದಿದೆ.
ಕಟುಕರಿಗೆ ಹೋಗುವ ಗೋವುಗಳನ್ನು ರಸಿ, ಅಲ್ಲಿಗೆ ತಂದು ಬಿಡುತ್ತಾರೆ. ವಯಸ್ಸಾದ ಗೋವುಗಳನ್ನು ನಿರ್ವಹಣೆ ಮಾಡಲಾಗದವರು ಕೂಡ ಅಲ್ಲಿಗೆ ತಂದು ಬಿಟ್ಟು ಹೋಗುತ್ತಾರೆ.
ಈ ಧಾರ್ಮಿಕ ಸಂಸ್ಥೆಯ ಗೋರಾ ಕೇಂದ್ರದಲ್ಲಿ ಅಂತವುಗಳನ್ನು ರಸಿ, ಪೋಷಿಸಿ, ಸಂತಾನಾಭಿವೃದ್ಧಿ ಕಾರ್ಯ ನಡೆಯುತ್ತಿದೆ. ಗೋಸೇವಾ ಮಹತ್ಕಾರ್ಯಕ್ಕೆ ಪಾತೀತವಾಗಿ ಹಲವು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೋ ಶಾಲೆಗೆ ನಿತ್ಯ ನೂರಾರು ಜನರು ಭೇಟಿ ನೀಡಿ ಅಲ್ಲಿನ ವ್ಯವಸ್ಥಿತ ನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗುತ್ತಾರೆ.
ಇಂತಹ ಧಾರ್ಮಿಕ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಗೋರಾ ಕೇಂದ್ರದಿಂದ ಕಲಬುರಗಿ ಕಸಾಯಿಖಾನೆಗೆ ಗೋವುಗಳನ್ನು ಕಳಿಸಿಕೊಡಲಾಗುತ್ತಿದೆ ಎಂಬ ಹಮೀದ್ ಮುಶ್ರೀಫ್ ಆರೋಪದಿಂದ ಶತಮಾನ ಕಂಡ ನಮ್ಮ ಧಾರ್ಮಿಕ ಸಂಸ್ಥೆಗೆ ಬಹಳ ಆಘಾತವಾಗಿದೆ.
ವಾಗ ಮತ್ತು ಎಷ್ಟು ಗೋವುಗಳನ್ನು ಕಲಬುರಗಿಗೆ ಕಳಿಸಲಾಗಿದೆ? ಎಷ್ಟಕ್ಕೆ ಮಾರಾಟ ಮಾಡಲಾಗಿದೆ? ಏನಾದರೂ ಈ ಬಗ್ಗೆ ಸ್ಪಷ್ಟ ದಾಖಲೆ ಇದ್ದರೆ, ಒಂದು ವಾರದೊಳಗೆ ನೀಡಬೇಕು. ಇಲ್ಲದಿದ್ದರೆ ಸುಳ್ಳು ಆರೋಪ ಮಾಡಿದವರ ಮೇಲೆ ಮಾನನಷ್ಟ ಪ್ರಕರಣ ದಾಖಲಿಸುವುದಾಗಿ ಸಂಸ್ಥೆಯು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದೆ.