ಸಿದ್ಧೇಶ್ವರ ಶ್ರೀಗಳು ನಡೆದಾಡುವ ದೇವರು

23
ಕಾಗವಾಡ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳ ಗುರು ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪ್ರೊ.ಬಿ.ಎ. ಪಾಟೀಲ, ವಿ.ಎಸ್. ತುಗಶೆಟ್ಟಿ , ಎಸ್.ಪಿ. ತಳವಾರ, ಪ್ರೊ.ಸೋನಾಲಿ ಪಡತರೆ ಇತರರಿದ್ದರು.
Published on

ಕಾಗವಾಡ: ವಿಜಯಪುರದ ಸಿದ್ಧೇಶ್ವರ ಶ್ರೀಗಳು ಜೀವಂತ ದೇವರಿಗೆ ಹೋಲಿಸಬಹುದಾದ ವ್ಯಕ್ತಿತ್ವ ಹೊಂದಿದ್ದರು. ಅಂತೆಯೇ ಅವರನ್ನು ಸಾಮಾನ್ಯರು ನಡೆದಾಡುವ ದೇವರೆಂದು ಕರೆಯುತ್ತಾರೆ ಎಂದು ಮಲ್ಲಿಕಾರ್ಜುನ ಆಶ್ರಮ ಟ್ರಸ್ಟ್‌ನ ಕಾರ್ಯದರ್ಶಿ ಪ್ರೊ. ಬಿ.ಎ. ಪಾಟೀಲ ಹೇಳಿದರು.

ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲಿಂ. ವಿಜಯಪುರದ ಸಿದ್ಧೇಶ್ವರ ಶ್ರೀಗಳ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜು ಆಡಳಿತಾಧಿಕಾರಿ ವಿ.ಎಸ್. ತುಗಶೆಟ್ಟಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಎಸ್.ಪಿ. ತಳವಾರ, ಡಾ. ಎ.ಎಂ. ಜಕ್ಕಣ್ಣವರ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸಿದ್ಧೇಶ್ವರರ ಜೀವನ ಸಾಧನೆ ಕುರಿತ ಪ್ರಬಂಧ ಮತ್ತು ಆಯ್ದ ಪ್ರವಚನಗಳ ಮೇಲೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರೊ.ಜೆ.ಕೆ. ಪಾಟೀಲ, ಪ್ರೊ.ವಿ.ಬಿ.ಬುರ್ಲೆ, ಪ್ರೊ.ಎಸ್.ಎಸ್. ಮೋರೆ, ಪ್ರೊ.ಸೋನಾಲಿ ಪಡತರೆ, ಗ್ರಂಥಪಾಲಕ ಪಿ.ಎಂ. ದೊಡಮನಿ, ಪ್ರೊ.ಎಸ್.ಎಂ. ಘೋರ್ಪಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net