ನರಗುಂದ: ಇಲ್ಲಿನ ಸಿದ್ಧೇಶ್ವರ ಜಾತ್ರಾ ಮಹೋತ್ಸವ, ರಥೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಪಟ್ಟಣದ ಪಂಚಗ್ರಹ ಗುಡ್ಡದ ಹಿರೇಮಠದಿಂದ ಫೆ. 19ರಿಂದ ಮಾ. 1ರವರೆಗೆ ಹಮ್ಮಿಕೊಳ್ಳಲಾಗಿದೆ. ಪಂಚಗ್ರಹ ಗುಡ್ಡದ ಹಿರೇಮಠದ ಹಿರಿಯ ಶ್ರೀಗಳಾಗಿದ್ದ ಲಿಂ. ಚನ್ನವೀರ ಶಿವಾಚಾರ್ಯರ 45ನೇ ಹಾಗೂ ಕಿರಿಯ ಶ್ರೀಗಳಾಗಿದ್ದ ಲಿಂ. ಚನ್ನವೀರ ಶಿವಾಚಾರ್ಯರ 13ನೇ ಪುಣ್ಯಸ್ಮರಣೋತ್ಸವ ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಸಿದ್ಧೇಶ್ವರರ ಜಾತ್ರಾ ಮಹೋತ್ಸವವು ಪೀಠಾಧ್ಯಕ್ಷರಾದ ಸಿದ್ಧಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜರುಗಲಿದೆ.
ಫೆ. 19ರಂದು ಬೆಳಗ್ಗೆ 7ಕ್ಕೆ ಪತ್ರಿವನ ಮಠದ ಡಾ. ಗುರುಸಿದ್ಧವೀರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಲಿದೆ. ಫೆ. 19ರಿಂದ ಮಾ. 1ರವರೆಗೆ ಪ್ರತಿದಿನ ಸಾಂಯಕಾಲ 7ರಿಂದ 8 ಗಂಟೆಯವರೆಗೆ ನವಲಗುಂದ ಆಜಾತ ನಾಗಲಿಂಗ ಅಜ್ಜನ ಚರಿತ್ರೆ ಪ್ರವಚನ ನಡೆಯಲಿದೆ. ಫೆ. 27ರಂದು ಸಂಜೆ 8 ಗಂಟೆಗೆ ಧರ್ಮಸಭೆ ಜರುಗಲಿದೆ. ಬಾಳೆಹೊನ್ನೂರಿನ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಸಾನ್ನಿಧ್ಯ ವಹಿಸುವರು. ಡಾ. ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯರು, ಮಾಬುಸುಭಾನಿ ದರ್ಗಾದ ಬಾಬೂ ಅಜ್ಜನವರು. ಶಾಸಕ ಸಿ.ಸಿ. ಪಾಟೀಲ, ಅನ್ನಪೂರ್ಣಾ ಯಲಿಗಾರ, ಇತರರು ಭಾಗಿಯಾಗಲಿದ್ದಾರೆ.
ಫೆ. 28ರಂದು ಅಧ್ಯಾತ್ಮ ಮತ್ತು ಅರೋಗ್ಯ ಗೋಷ್ಠಿ ರಾತ್ರಿ 8ಗಂಟೆಗೆ ಜರುಗಲಿದೆ. ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ಶಿರೋಳ, ಭೈರನಹಟ್ಟಿ ಶ್ರೀಗಳಾದ ಶಾಂತಲಿಂಗ ಸ್ವಾಮೀಜಿಗಳು, ಮಾಜಿ ಶಾಸಕ ಬಿ.ಆರ್. ಯಾವಗಲ್ ಆಗಮಿಸಲಿದ್ದಾರೆ. ಮಾ. 1ರಂದು ಬೆಳಗ್ಗೆ 5.30ಕ್ಕೆ ಕತೃ ಸಿದ್ಧೇಶ್ವರರ ಗದ್ದುಗೆಗೆ ರುದ್ರಾಭಿಷೇಕ, ಅಯ್ಯಚಾರ ಹಾಗೂ ಲಿಂಗದೀಕ್ಷೆ ಹಮ್ಮಿಕೊಳ್ಳಲಾಗಿದೆ. ಸಂಜೆ 5.30ಕ್ಕೆ ಮಹಾರಥೋತ್ಸವ ಸಂಜೆ 8ಕ್ಕೆ ಧರ್ಮಸಭೆ ಹಾಗೂ ಮಂಗಲೋತ್ಸವ ಜರುಗಲಿದೆ ಎಂದು ಪಂಚಗ್ರಹ ಗುಡ್ಡದ ಹಿರೇಮಠದ ಭಕ್ತಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.