ಸಿದ್ಧೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಗಂಗಾಪೂಜೆ

19ALD 01
Published on

ಅಳವಂಡಿ: ಗ್ರಾಮದ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ತುಂಗಭದ್ರಾ ನದಿಗೆ ಗಂಗಾ ಪೂಜೆ ಪೂಜೆ ಸಲ್ಲಿಸಲು ಸೋಮವಾರ ಮೆರವಣಿಗೆ ಮೂಲಕ ತೆರಳಲಾಯಿತು.

ಬೆಳಗ್ಗೆ ವಿಶೇಷ ಪೂಜೆ, ಅಭಿಷೇಕ ನಡೆದವು. ನಂತರ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ಸಿದ್ಧೇಶ್ವರ ಮೂರ್ತಿಯನ್ನಿರಿಸಿ ಕಳಸ ಹಾಗೂ ವಾದ್ಯ ಮೇಳದೊಂದಿಗೆ ದೇವಸ್ಥಾನವನ್ನು ಪ್ರದಕ್ಷಣೆ ಹಾಕಲಾಯಿತು. ನಂತರ ತುಂಗಭದ್ರಾ ನದಿ ತಟಕ್ಕೆ ತೆರಳಲಾಯಿತು. ಪ್ರಮುಖರಾದ ಅಂದಪ್ಪ ಜೋಳದ, ಶಿವಪ್ಪ ಕಣವಿ, ಅಂದಪ್ಪ ಬಾರಕೇರ, ಶಾಂತಯ್ಯ ಪೂಜಾರ, ವಿರೂಪಾಕ್ಷ ಪೂಜಾರ, ಶರಣಯ್ಯ ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net