ಸಿದ್ಧೇಶ್ವರ ದೇವರ ಜಾತ್ರೋತ್ಸವ 23ರಿಂದ

19sambaragi1
Published on

ಸಂಬರಗಿ: ಸಮೀಪದ ಮದಭಾವಿ ಗ್ರಾಮದ ಸಿದ್ಧೇಶ್ವರ ದೇವರ ಜಾತ್ರೆಯು ಏ.23ರಿಂದ 28ರ ವರೆಗೆ ಜರುಗಲಿದೆ. ಏ.23ರಂದು ರಾತ್ರಿ 9 ಗಂಟೆಗೆ ಕರಿ ಕಟ್ಟುವುದು, ಸಿದ್ಧೇಶ್ವರ ದೇವರ ಪೂಜೆ ಮತ್ತು ಅಭಿಷೇಕ ನಡೆಯಲಿದೆ.

ಏ.24ರಂದು ಸಂಜೆ 6 ಗಂಟೆಗೆ ವಿಶೇಷ ಪೂಜೆ, ಏ.25ರಂದು ಸಂಜೆ ಮಹಾಪ್ರಸಾದ ಅರ್ಪಿಸಲಾಗುವುದು. ಡೊಳ್ಳಿನ ಪದಗಳು, ಏ.27ರಂದು ಕ್ಷೀರಾಭಿಷೇಕ ಹಾಗೂ ನೈವೇದ್ಯ ಅಪ್ಣೆ, ಬೆಳಗ್ಗೆ ಡೋಲ್ ವಾದನ ಸ್ಪರ್ಧೆ, ವೀರಭದ್ರೇಶ್ವರ ನಾಟ್ಯ ಸಂಘ ಸವದಿ ಇವರಿಂದ ಶ್ರೀಕೃಷ್ಣ ಪಾರಿಜಾತ ಕಾರ್ಯಕ್ರಮ ನಡೆಯಲಿದೆ.

ಏ.28ರಂದು ಮಹಾಪೂಜೆ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ, ಬಳಿಕ ಮಹಾಪ್ರಸಾದ, ಸಂಜೆ ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ. ದೇವಸ್ತಾನ ಸಮಿತಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಜಾತ್ರಾ ಸಮಿತಿ ವಿನಂತಿಸಿದೆ. ಜಾತ್ರೆಗೆ ಬರುವ ಭಕ್ತರಿಗಾಗಿ ಅಥಣಿ, ಮಿರಜ್‌ನಿಂದ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net