

ಹುಬ್ಬಳ್ಳಿ : ಇಲ್ಲಿನ ಶ್ರೀ ಸಿದ್ಧಾರೂಢಮಠದ ಕಾಣಿಕೆ ಪೆಟ್ಟಿಗೆಯನ್ನು ಬುಧವಾರದಂದು ತೆಗೆದು ಎಣಿಕೆ ಮಾಡಲಾಗಿದ್ದು, 47.12 ಲಕ್ಷ ರೂ. ಕಾಣಿಕೆ ಸಂಗ್ರಹಗೊಂಡಿದೆ.
ಆ. 13 ರಿಂದ ಸೆ. 18ರ 36 ದಿನಗಳಲ್ಲಿ ಒಟ್ಟು 42,12,603 ರೂ. ಸಂಗ್ರಹಗೊಂಡಿದೆ. ಎಸ್ಬಿಐ ಬ್ಯಾಂಕಿನ ಶ್ರೀ ಸಿದ್ಧಾರೂಢ ನಗರ ಶಾಖೆಯ ವ್ಯವಸ್ಥಾಪಕರು, ಸಿಬ್ಬಂದಿ, ಶ್ರೀಮಠದ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಕಾಣಿಕೆ ಪೆಟ್ಟಿಗೆ ತೆಗೆದು, ಎಣಿಕೆ ಮಾಡಲಾಯಿತು.
ಟ್ರಸ್ಟ್ ಕಮೀಟಿ ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಗೀತಾ ಕಲಬುರ್ಗಿ, ಉದಯಕುಮಾರ ನಾಯ್ಕ, ಬಾಳು ಮಗಜಿಕೊಂಡಿ, ವಿನಾಯಕ ಘೊಡ್ಕೆ ಹಾಗೂ ಇತರರು ಸಂದರ್ಭದಲ್ಲಿ ಹಾಜರಿದ್ದರು.