ಸಿದ್ಧಾರೂಢಮಠದಲ್ಲಿ 22.52 ಲಕ್ಷ ರೂ. ಕಾಣಿಕೆ ಸಂಗ್ರಹ

Shree Siddharudhamatha New
Published on

ಹುಬ್ಬಳ್ಳಿ : ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದ ಕಾಣಿಕೆ ಪೆಟ್ಟಿಗೆಯಲ್ಲಿ ಕೇವಲ 28 ದಿನಗಳಲ್ಲಿ 22.55 ಲಕ್ಷ ರೂ. ಸಂಗ್ರಹಗೊಂಡಿದೆ.

ಕಳೆದ ಏ. 19 ರಿಂದ ಮೇ 17ರವರೆಗಿನ ಅವಧಿಯಲ್ಲಿ ಶ್ರೀ ಮಠದ ಕಾಣಿಕೆ ಪೆಟ್ಟಿಗೆಯಲ್ಲಿ 22,55,972 ರೂ. ಸಂಗ್ರಹಗೊಂಡಿದ್ದು, ಮೇ 17ರಂದು ಕಾಣಿಕೆ ಹಣವನ್ನು ಎಣಿಕೆ ಮಾಡಲಾಯಿತು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶ್ರೀ ಸಿದ್ಧಾರೂಢನಗರ ಶಾಖೆಯ ಮ್ಯಾನೇಜರ್, ಸಿಬ್ಬಂದಿ ಹಾಗೂ ಭಕ್ತರ ಸಮ್ಮುಖದಲ್ಲಿ ಕಾಣಿಕೆ ಪೆಟ್ಟಿಗೆ ತೆರೆದು ಎಣಿಕೆ ಮಾಡಲಾಯಿತು.

ಎಣಿಕೆ ಮೇಲ್ವಿಚಾರಣೆಯನ್ನು ಟ್ರಸ್ಟ್ ಕಮೀಟಿಯ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ, ವೈಸ್-ಚೇರ್ಮನ್ ಉದಯಕುಮಾರ ನಾಯ್ಕ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಮಂಜುನಾಥ ಮುನವಳ್ಳಿ, ವಿನಾಯಕ ಘೊಡ್ಕೆ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net