

ಹುಬ್ಬಳ್ಳಿ : ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ 27,57,490 ರೂ. ಕಾಣಿಕೆ ಸಂಗ್ರಹಗೊಂಡಿದೆ.
ಕಳೆದ ಡಿ. 20 ರಿಂದ 2024ರ ಜ. 17ರವರೆಗಿನ 27 ದಿನಗಳಲ್ಲಿ ಈ ಕಾಣಿಕೆ ಸಂಗ್ರಹಗೊಂಡಿದೆ. ಶನಿವಾರದಂದು ಕಾಣಿಕೆ ಪೆಟ್ಟಿಗೆಯನ್ನು ತೆರೆದು, ಎಣಿಕೆ ಮಾಡಲಾಯಿತು.
ಎಣಿಕೆ ಮೇಲ್ವಿಚಾರಣೆಯನ್ನು ಟ್ರಸ್ಟ್ ಕಮೀಟಿ ಚೇರ್ಮನ್ ಬಸವರಾಜ ಸಿ. ಕಲ್ಯಾಣಶೆಟ್ಟರ, ವೈಸ್ ಚೇರ್ಮನ್ ಉದಯಕುಮಾರ ನಾಯ್ಕ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ ಹಾಗೂ ಇತರರು ವಹಿಸಿದ್ದರು. ಟ್ರಸ್ಟ್ ಸಿಬ್ಬಂದಿ ಹಾಗೂ ಭಕ್ತರು ಹಾಜರಿದ್ದರು.