

ಹಾರೂಗೇರಿ: ಭಕ್ತಿ ಪರಂಪರೆಯಲ್ಲಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಸಂತ ಮಹಾಂತರಲ್ಲಿ ಆಧ್ಯಾತ್ಮಿಕ ಕೀರ್ತಿ ಬೆಳೆಸಿರುವ ಹುಬ್ಬಳ್ಳಿ ಸಿದ್ಧಾರೂಢರು ಹಾಗೂ ಅವರ ಶಿಷ್ಯ ಗುರುನಾಥರೂಢರ ಆಧ್ಯಾತ್ಮ ಪರಂಪರೆ ನಾಡಿನ ಕೀರ್ತಿ ಕಳಶ ಎಂದು ಹುಬ್ಬಳ್ಳಿ ಶ್ರೀಸಿದ್ಧಾರೂಢಮಠದ ಧರ್ಮದರ್ಶಿ ಚನ್ನವೀರ ಮುಂಗುರುವಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಸದ್ಗುರು ಶ್ರೀಚನ್ನವೃಷಭೇಂದ್ರ ದೇವರಕೊಂಡಜ್ಜನವರ ಲೀಲಾ ಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶ್ರೀಸಿದ್ಧಾರೂಢರ ಜ್ಯೋತಿಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸದ್ಗುರು ಸಿದ್ಧಾರೂಢರು ಹಾಗೂ ಸದ್ಗುರು ಶ್ರೀಚನ್ನವಷಭಭೇಂದ್ರ ದೇವರಕೊಂಡಜ್ಜನವರು ಸಮಕಾಲಿನ ಸಾಧು ಸಂತರು. ಭಕ್ತರ ಉದ್ಧಾರ ಬಯಸಿ ತಮ್ಮ ಇಡೀ ಜೀವನವನ್ನು ಭಕ್ತಿ ಪರಂಪರೆಯಲ್ಲಿ ಪವಾಡಗಳಿಂದ ಆಧ್ಯಾತ್ಮ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಇಂಚಲ ಶ್ರೀಮಠದ ಕಾರ್ಯಾಧ್ಯಕ್ಷ ಪೂರ್ಣಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಸದ್ಗುರು ಸಿದ್ಧಾರೂಢರು ಅವರ ಲೀಲಾಮಯ ಜಗತ್ತಿನಲ್ಲಿ ಲೀನರಾದ ಸದ್ಗುರು ಸಿದ್ಧಾರೂಢರ ಹಾಗೂ ಸದ್ಗುರು ಗುರುನಾಥಾರೂಢರ ಜ್ಯೋತಿಯಾತ್ರೆ ಹಾರೂಗೇರಿಗೆ ಆಗಮಿಸಿದ್ದು ಪೂರ್ವಜನ್ಮದ ಪುಣ್ಯದ ಲ ಎಂದರು. ಅಪ್ಪಾಸಾಹೇಬ ಕುಲಕರ್ಣಿ ಸ್ವಾಗತಿಸಿದರು.
ಶಿವಗೊಂಡ ಧರ್ಮಟ್ಟಿ, ಲಾಲಸಾಬ ಜಮಾದಾರ್, ತಮ್ಮಾಣಿ ಕುರಿ, ಶಿವಾನಂದ ತುಳಸಿಗೇರಿ, ರಾಘು ಕುಲಕರ್ಣಿ, ಹನುಮಂತ ಕುರಿ, ಮಹೇಶ ಮುಂಗುರುವಾಡಿ, ಮಹಾನಿಂಗ ಮುಂಗುರುವಾಡಿ, ಶ್ರೀಶೈಲಗೌಡ ಉಮರಾಣಿ, ನೇಮಿನಾಥ ಕೊತ್ತಲಗಿ, ಸಿದ್ದಣ್ಣ ಗವನ್ನವರ, ಶಂಕರಗೌಡ ಸಂಗೊಂದಿ, ಈರಣ್ಣ ಪಾಳ್ಯದ, ಜೆ.ಸಿ.ಬಾವಿಕಟ್ಟಿ, ಶಿವಮೂರ್ತಪ್ಪ ಶಿವಶಿಂಪಿ ಇತರರಿದ್ದರು. ಸುನೀಲ ಕಬ್ಬೂರ ನಿರೂಪಿಸಿದರು.