ಸಿದ್ಧಾರೂಡ ಮೂರ್ತಿ ಮೆರವಣಿಗೆ

28 SND 01
ಮುದಗಲ್ ಸಿದ್ಧಾರ್ಥ ನಗರದ ಸಿದ್ಧಾರೂಢರ ಜಾತ್ರೆ ನಿಮಿತ್ಯ ಪೂರ್ಣ ಕುಂಭಗಳ ಹಾಗೂ ಉಭಯ ಶ್ರೀಗಳನ್ನು ಸಾರೋಟದಲ್ಲಿ ಮೆರವಣಿಗೆ ಮಾಡಲಾಯಿತು. ಪ್ರಮುಖರಾದ ಪರಶುರಾಮ, ಬಸವರಾಜ ಕೊಟ್ಟೂರು, ಕೃಷ್ಟ್ನಾ ಛಲವಾದಿ, ದಿಲೀಪ್ , ಬಾಳಪ್ಪ ಮೇಗಳಮನಿ, ನಿವೃತ್ತ ಎ.ಎಸ್.ಐ ಕನಕಪ್ಪ ಛಲವಾದಿ ಇತರರಿದ್ದರು.
Published on

ಮುದಗಲ್: ಪಟ್ಟಣದ ಸಿದ್ದಾರ್ಥ ನಗರದ ಸಿದ್ಧಾರೂಢರ ಮಠದ ಜಾತ್ರಾ ಮಹೋತ್ಸವವು ಬುಧವಾರ ಶ್ರದ್ಧಾ- ಭಕ್ತಿಯಿಂದ ಜರುಗಿತು. ಶ್ರೀ ಮಠದಲ್ಲಿ ಜಾತ್ರೆ ನಿಮಿತ್ಯ ಭಜನಾ ಸೇವೆ ಜರುಗಿತು.

ನಂತರ ಅಲಂಕೃತ ಸಾರೋಟದಲ್ಲಿ ಮುಂಬೈ ನ ಸಜಾನಂದ ಶ್ರೀಗಳು, ಹಾಗೂ ಜಮಖಂಡಿಯ ಕೃಷ್ಟಾನಂದ ಶ್ರೀಗಳನ್ನು ಮೆರವಣಿಗೆ ಮಾಡಲಾಯಿತು. ತೆರದ ವಾಹನದಲ್ಲಿ ಸಿದ್ಧಾರೂಢರ ಮೂರ್ತಿ ಪ್ರತಿಷ್ಠಾಪಿಸಿ 101 ಪೂರ್ಣ ಕುಂಭಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಡಿ.ಜೆ ಸದ್ದಿಗೆ ಯುವಕರು ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಭಜನಾ ಸೇವೆ ಎಲ್ಲರ ಗಮನ ಸೆಳೆಯಿತು.


ಪ್ರಮುಖರಾದ ದೇವರಾಜ ತೆಳಗಡಮನಿ, ಅಮರೇಶ , ಹುಸೇನಪ್ಪ ಛಲವಾದಿ ಸೇರಿದಂತೆ ಸಿದ್ಧಾರ್ಥ ನಗರದ ಗುರು ಹಿರಿಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net