ಸಿದ್ಧಾರೂಡರ ಜಾತ್ರೆಯಲ್ಲಿ ಸಾಮೂಹಿಕ ವಿವಾಹ

31LNG03
ಕರಡಕಲ್‌ನಲ್ಲಿ ಸಿದ್ಧಾರೂಡರ ಜಾತ್ರಾ ಮಹೋತ್ಸವ ನಿಮಿತ್ತ ಶುಕ್ರವಾರ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು. ಮುಂಬೈನ ಸಹಜಾನಂದ ಅವಧೂತರು, ಕೃಷ್ಣಾನಂದ ಅವಧೂತರು, ಜ್ಞಾನಾನಂದ ಸ್ವಾಮೀಜಿ, ಮುಖಂಡರಾದ ಭೂಪನಗೌಡ ಪಾಟೀಲ್, ಗಿರಿಮಲ್ಲನಗೌಡ ಪಾಟೀಲ್ ಇದ್ದರು.
Published on


ಲಿಂಗಸುಗೂರು: ಕರಡಕಲ್ ಗ್ರಾಮದಲ್ಲಿ ಸಿದ್ಧಾರೂಡರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದ್ದು, 15 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.


ಜಾತ್ರೆಯ ಅಂಗವಾಗಿ ಮಾ.28 ರಿಂದ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಳಸಾರೋಹಣ, ಪಲ್ಲಕ್ಕಿ ಉತ್ಸವ, ಪ್ರತಿಭಾ ಪುರಸ್ಕಾರ, ಪ್ರವಚನ, ಭಜನೆ ಸೇರಿ ವಿವಿಧ ಕಾರ್ಯಕ್ರಮಗಳು ನಡೆದವು. ಮುಂಬೈನ ಸಹಜಾನಂದ ಅವಧೂತರು, ಕೃಷ್ಣಾನಂದ ಅವಧೂತರು, ಜ್ಞಾನಾನಂದ ಸ್ವಾಮೀಜಿ, ಪ್ರಮುಖರಾದ ಭೂಪನಗೌಡ ಪಾಟೀಲ್, ಗಿರಿಮಲ್ಲನಗೌಡ ಪಾಟೀಲ್, ಸಿದ್ದು ಬಂಡಿ, ಡಾ.ಆರ್.ಸುದರ್ಶನ, ಈಶ್ವರ ವಜ್ಜಲ್, ಇಮ್ತಿಯಾಜ್ ಪಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net