

ಚಿಕ್ಕೋಡಿ: ಮನುಷ್ಯನಿಗೆ ಅಚ್ಚಳಿಯಲಾರದ ಸಂಪತ್ತೆಂದರೆ ಅದು ಜ್ಞಾನ. ಸದ್ಗುರುವಿನ ಪರಮ ಶಿಷ್ಯನಾಗಿ ಅಡಂಬರದ ಜೀವನ ಬಿಟ್ಟು ಸಂತ ಶರಣರ ಸಮಾಗಮದಲ್ಲಿ ಬೇರೆತು ಅಧ್ಯಾತ್ಮಿಕದಲ್ಲಿ ಕಾಲ ಕಳೆಯಬೇಕು ಎಂದು ಯಾದಗೂಡದ ಶರಣ ಅಲಗೌಡ ಪಾಟೀಲ ಹೇಳಿದರು.
ತಾಲೂಕಿನ ಧುಳಗನವಾಡಿ ಸದ್ಗುರು ಶರಣ ಕಲಾಸೇವಾ ಮಂಡಳ ಖೋತ ಪರಿವಾರದ ಆಶ್ರಯದಲ್ಲಿ ಭಾನುವಾರ ಸಿದ್ಧಾರೂಢರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ 103ನೇ ಸುವಿಚಾರ ಚಿಂತನಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇರೂರದ ಕೇದಾರಲಿಂಗ ಶರಣರು ಮಾತನಾಡಿ, ಲೋಕ ಕಲ್ಯಾಣಕ್ಕೆ ಭಕ್ತರಿಗೆ ಭಕ್ತಿ ಬೋಧನೆ ಮಾಡಲು ಜಗದ್ಗುರು ಸಿದ್ಧಾರೂಢರು ಕಷ್ಟ ನೋವುಗಳನ್ನು ಸಹಿಸಿಕೊಂಡು ಅನೇಕ ಪವಾಡ ಮಾಡಿದ್ದಾರೆ ಎಂದರು.
ಸಾವಿತ್ರಮ್ಮ ವಿಜಯನಗರೆ, ಗಿರೀಶ ಬಿಸಲ್ನಾಯಕ್, ನವಲಿಹಾಳದ ರಾಜು ಚೌಗುಲಾ ಅವರನ್ನು ಸನ್ಮಾನಿಸಲಾಯಿತು. ಅಪ್ಪಾಸಾಹೇಬ ವಾಗಮಾರೆ, ಶಶಿಕಾಂತ ಜಂಗಿ, ಭರತ ಕಲಾಚಂದ್ರ ಇತರರಿದ್ದರು. ಸುಪ್ರಿಯಾ ಕಲಾಚಂದ್ರ ಪ್ರಾರ್ಥಿಸಿದರು. ಸುಜಾತಾ ಮಗದುಮ್ಮ ನಿರೂಪಿಸಿದರು. ಓಂಕಾರ ಖೋತ್ ವಂದಿಸಿದರು.