ಸಿದ್ಧಾರೂಢಸ್ವಾಮಿ ವೈಕುಂಠ ಏಕಾದಶಿ ಸಿದ್ಧತೆ

08kkr2(1-25 vaikunta ekadasi invitation
ಕಿಕ್ಕೇರಿ ಸಿದ್ಧಾರೂಢ ಮಠದಲ್ಲಿ ಬುಧವಾರ ವೈಕುಂಠ ಏಕಾದಶಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು. ಸೂರ್ಯನಾರಾಯಣ, ಡಿ.ಉಮೇಶ್, ಕೃಷ್ಣಶೆಟ್ಟಿ ಮತ್ತಿತರರಿದ್ದರು.
Published on

ಕಿಕ್ಕೇರಿ: ಇಲ್ಲಿನ ಸಿದ್ಧಾರೂಢಸ್ವಾಮಿ ಮಠದಲ್ಲಿ ಜ.10ರ ಶುಕ್ರವಾರ ವೈಕುಂಠ ಏಕಾದಶಿ ಕಾರ್ಯಕ್ರಮ ಸದ್ಭಕ್ತರ ಸಮಾಗಮದಲ್ಲಿ ಜರುಗಲಿದೆ ಎಂದು ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ತಿಳಿಸಿದರು.

ಸಿದ್ಧಾರೂಢಸ್ವಾಮಿ ಮಠದಲ್ಲಿ ಬುಧವಾರ ವೈಕುಂಠ ಏಕಾದಶಿ ಹಾಗೂ ಪ್ರತಿಭಾ ಪುರಸ್ಕಾರ ಸಂಆರಂಭದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಮುಂಜಾನೆ 5.30ಕ್ಕೆ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಮೂರ್ತಿ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಕಳಶಾರ್ಚನೆ, ಅಲಂಕಾರ ಸೇವೆ, ವಿಶೇಷ ಪೂಜೆಗಳು ಜರುಗಲಿವೆ. ತದನಂತರ ಭಕ್ತರಿಗೆ ವೈಕುಂಠ ಉತ್ತರದ್ವಾರ ಪ್ರವೇಶ ಮಾಡಿ ದೇವರ ದರ್ಶನ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ ಎಂದರು.

ಸಂಘದ ಕಾರ್ಯದರ್ಶಿ ಡಿ. ಉಮೇಶ್ ಮಾತನಾಡಿ, ಜ.11ರಂದು ಬೆಳಗ್ಗೆ 11ಕ್ಕೆ ನೇಕಾರ ಸಮುದಾಯ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ದಿನದರ್ಶಿಕೆ ಬಿಡುಗಡೆ, ಸಾಮೂಹಿಕ ಅನ್ನದಾಸೋಹ ಏರ್ಪಡಿಸಲಾಗಿದೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಎಚ್.ಟಿ.ಮಂಜು, ಮನ್ಮುಲ್ ನಿರ್ದೇಶಕ ಡಾಲು ರವಿ, ಕುರುಹಿನಶೆಟ್ಟಿ ಸಮಾಜದ ರಾಜ್ಯಾಧ್ಯಕ್ಷ ಅಂಬಾದಾಸ್ ಕಾಮೂರ್ತಿ, ಆರ್‌ಟಿಒ ಅಧಿಕಾರಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ತಹಸೀಲ್ದಾರ್ ಎಸ್.ಯು.ಅಶೋಕ್, ಬೆಂಗಳೂರು ಬ್ಲೂಬೆಲ್ ಪಬ್ಲಿಕ್ ಶಾಲೆ ಅಧ್ಯಕ್ಷ ಕೆ.ವಿ.ಶ್ರೀನಿವಾಸ್, ಮೈಸೂರು ಕುರುವಿನಶೆಟ್ಟಿ ವಿಚಾರ ವೇದಿಕೆ ಅಧ್ಯಕ್ಷ ಕೆ.ಎಚ್. ಸಂಜೀವಶೆಟ್ಟಿ, ಕಾರ್ಯದರ್ಶಿ ಕೆ.ಜೆ.ನಾರಾಯಣ್, ನಿವೃತ್ತ ಡಿಡಿಪಿಐ ಕೆ.ಸಿ.ಕೃಷ್ಣಶೆಟ್ಟಿ, ಸಾಹಿತಿ ಜೇನುಗೂಡು ಮಹೇಶ್, ಮುಖಂಡರಾದ ಜಾವಾ ಸಂಜೀವಶೆಟ್ಟಿ, ಕೆ.ಜೆ.ರಾಮಶೆಟ್ಟಿ, ಕೆ.ಎಚ್.ನಾರಾಯಣಶೆಟ್ಟಿ, ಗುರುಮಲ್ಲೇಶ್, ತಿಮ್ಮಶೆಟ್ಟಿ,ಮೈಕೋ ಶಿವರಾಮಶೆಟ್ಟಿ, ಕೆ.ಎಚ್.ಲಕ್ಷ್ಮೀನಾರಾಯಣ್, ಡಾ.ಗೋಪಾಲಕೃಷ್ಣಶೆಟ್ಟಿ, ಬಸವರಾಜ್, ಮಂಜು ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net