

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮದಿಹಾಳ ಬಳಿಯ ಶ್ರೀ ಸಿದ್ಧಾರೂಢ ಕಾಲನಿಯಲ್ಲಿನ ಶ್ರೀ ಸಿದ್ಧಾರೂಢ ಮಠದ ಪ್ರಥಮ ವಾರ್ಷಿಕೋತ್ಸವ ಮತ್ತು ಜಾತ್ರೆ ಫೆ. 10 ರಂದು ಜರುಗಲಿದೆ.
ಅಂದು ಪ್ರಾತಃಕಾಲದಲ್ಲಿ ಶ್ರೀ ಮಠದಲ್ಲಿರುವ ಶ್ರೀ ಗುರು ಸಿದ್ಧಾರೂಢರ ಹಾಗೂ ಶ್ರೀ ಗುರುನಾಥ ರೂಢರ ಶಿಲಾ ವಿಗ್ರಹಗಳಿಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಪುಷ್ಪಾಲಂಕಾರ ಪೂಜೆ, ಮಹಾಮಂಗಳಾರತಿ, ನಂತರ ವಿವಿಧ ಹೋಮಗಳು ನಡೆಯಲಿವೆ.
ಬೆಳಗ್ಗೆ 9 ಗಂಟೆಗೆ ವಿವಿಧ ವಾದ್ಯಗಳೊಂದಿಗೆ ಶ್ರೀ ಸಿದ್ಧಾರೂಢರ ಉತ್ಸವ ಮೂರ್ತಿ ಪಲ್ಲಕ್ಕಿ ಉತ್ಸವ ಶ್ರೀ ಮಠದಿಂದ ಹೊರಟು ಮದಿಹಾಳ ಈಶ್ವರ ದೇವಾಲಯ ತಲುಪಿ ಮರಳಿ ಮಠಕ್ಕೆ ಆಗಮಿಸಲಿದೆ. ನಂತರ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 4 ಗಂಟೆಗೆ ಮಣಕವಾಡದ ಶ್ರೀ ಗುರು ಅಭಿನವ ಮೃತ್ಯುಂಜಯ ಸ್ವಾಮೀಜಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಭಕ್ತೀಗಿತೆಗಳ ಭಜನೆ ನಡೆಯಲಿದ್ದು, ಮಹಾನಗರದ ಸದ್ಭಕ್ತರು ಪಾಲ್ಗೊಳ್ಳುವಂತೆ ಮಠದ ಸೇವಾ ಸಮಿತಿ ಕೋರಿದೆ.