

ವಿಜಯಪುರ: ಶಿವಯೋಗಿ ಸಿದ್ಧರಾಮೇಶ್ವರರು ಚಿಕ್ಕಂದಿನಲ್ಲಿಯೇ ದೈವ ಸಾಾತ್ಕಾರ ಮಾಡಿಕೊಳ್ಳುವ ಮೂಲಕ ಸಮಾಜದ ಅಂಕು&ಡೊಂಕುಗಳನ್ನು ತಿದ್ದಿದ ಮಹಾಮಹಿಮರು ಎಂದು ಬಬಲೇಶ್ವರ ಬೃಹನ್ಮಠದ ಡಾ. ಮಹಾದೇವ ಶಿವಾಚಾರ್ಯರು ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಹಾಗೂ ಕಸಾಪ ನಗರ ಟಕಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ದತ್ತಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ಧರಾಮೇಶ್ವರರು ಸಕಲ ಜೀವರಾಶಿಗಳಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಹಲವಾರು ಕೆರೆ, ಕಟ್ಟೆಗಳನ್ನು ಕಟ್ಟುವ ಮೂಲಕ ಕಾಯಕಯೋಗಿ, ಕರ್ಮಯೋಗಿ ಹಾಗೂ ಶಿವಯೋಗಿ ಎನಿಸಿಕೊಂಡವರಲ್ಲದೆ ಮಹಿಳೆಯರಿಗೆ ದೈವತ್ವದ ಸ್ಥಾನ ನೀಡಿದ ಮಹಾಪುರುಷರು ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಳವಾಡ ಸರ್ಕಾರಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಜಿ.ಎಸ್. ಟಕ್ಕಳಕಿ ಮಾತನಾಡಿ, ಕಸಾಪ ಹಮ್ಮಿಕೊಳ್ಳುವ ದತ್ತಿಗೋಷ್ಠಿಗಳ ವಿಷಯಗಳು ವಿದ್ಯಾರ್ಥಿಗಳಿಗೆ ಾನವನ್ನು ಅರಿಯಲು ಬಹಳಷ್ಟು ಉಪಯುಕ್ತವಾಗಿವೆ ಎಂದರು.
ಸಾಹಿತಿ ಅರುಂಧತಿ ಹತ್ತಿಕಾಳ ಶಿವಯೋಗಿ ಸಿದ್ಧರಾಮೇಶ್ವರರ ಕುರಿತು ಉಪನ್ಯಾಸ ನೀಡಿ, ತಾ ಮಾಡಿದ ಹೆಣ್ಣು ತಮ್ಮ ತಲೆಯನೇರುತ್ತ ಎಂಬ ವಚನವನ್ನು ಮಾರ್ಮಿಕವಾಗಿ ವಿವರಿಸಿ, ಕಲ್ಯಾಣ ಕ್ರಾಂತಿಯ ನಂತರ ಸೊನ್ನಲಿಗೆಗೆ ಬಂದು ಕಾಯಕ ಸಿದ್ಧಾಂತವನ್ನು ಕೈಗೊಂಡ ಮಹಾನ್ ವಚನಕಾರರು ಸಿದ್ಧರಾಮೇಶ್ವರರು ಎಂದರು.
ಮಕರ ಸಂಕ್ರಾಂತಿಯ ವೈಜ್ಞಾನಿಕ ಹಿನ್ನೆಲೆ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ, ಭೂಮಿ ತಾಯಿಗೆ ಹಾಗೂ ದನಕರುಗಳಿಗೆ ಕೃತತೆ ಸಲ್ಲಿಸುವ ಸುಗ್ಗಿಯ ಹಬ್ಬವೇ ಈ ಮಕರ ಸಂಕ್ರಾಂತಿ ಎಂದರು.
ನೀಲಾ ಇಂಗಳೆ, ಬಸವರಾಜ ಪಟ್ಟಣಶೆಟ್ಟಿ, ದತ್ತಿ ಸಂಚಾಲಕರಾದ ರಾಜೇಸಾಬ ಶಿವನಗುತ್ತಿ, ಜಯಶ್ರೀ ಹಿರೇಮಠ ವೇದಿಕೆಯಲ್ಲಿದ್ದರು. ಶಾಂತಾ ವಿಭೂತಿ ಪ್ರಾರ್ಥಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಅಭಿಷೇಕ ಚಕ್ರವರ್ತಿ, ಶರಣಗೌಡ ಪಾಟೀಲ, ಆಶಾ ಬಿರಾದಾರ, ಸಂಗಮೇಶ ಕರೆಪ್ಪಗೋಳ, ಸಿದ್ದು ಮೇಲಿನಮನಿ, ಜಿ.ಎಸ್. ಬಳ್ಳೂರ, ಶ್ರೀಕಾಂತ ನಾಡಗೌಡ, ಲತಾ ಗುಂಡಿ, ಗಂಗಮ್ಮ ರೆಡ್ಡಿ, ಫಕ್ರುದ್ದೀನ ಹಿರೇಕೊಪ್ಪ, ಪರಶುರಾಮ ಚಲವಾದಿ, ಎನ್.ಎಂ. ಹರನಾಳ, ಪ್ರಶಾಂತ ಬೆಣ್ಣಿಮುದ್ದಿ, ರವೀಂದ್ರ ಬೆನಕಟ್ಟಿ, ಲಕ್ಷಿ$್ಮ ಬಿರಾದಾರ, ಖಾದಿರ ಭಾಷಾ ಬನ್ನಿಹಟ್ಟಿ, ಶಂಕರಲಿಂಗ ಬಿರಾದಾರ ಮತ್ತಿತರರಿದ್ದರು. ಶಿಲ್ಪಾ ಭಸ್ಮೆ ಸ್ವಾಗತಿಸಿದರು. ಪರವೀನ ಶೇಖ ನಿರೂಪಿಸಿದರು. ಶಿಲ್ಪಾ ಹಂಜಿ ವಂದಿಸಿದರು.