

ತರೀಕೆರೆ: ಪಟ್ಟಣದ ಶ್ರೀಗುರು ರೇವಣಸಿದ್ದೇಶ್ವರ ಸ್ವಾಮಿ ದೇಗುಲ ಆವರಣದಲ್ಲಿ ಅಜ್ಜಂಪುರ
ತಾಲೂಕಿನ ಸೊಲ್ಲಾಪುರ ಗ್ರಾಮದ ಶ್ರೀಗುರು ಸಿದ್ಧರಾಮೇಶ್ವರ ಸ್ವಾಮೀಜಿ ಪರೇವು ಸಹಸ್ರಾರು
ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.
ಬೆಳಗ್ಗೆ ಶ್ರೀಗುರು ರೇವಣಸಿದ್ದೇಶ್ವರ ಸ್ವಾಮಿ ದೇಗುಲದಲ್ಲಿ ಪರೇವು ಕಾರ್ಯದ ಅಂಗವಾಗಿ
ವಿವಿಧ ಪೂಜೆ ನಡೆದವು. ನಂತರ ಒಗ್ಗಯ್ಯ, ದಾಸಪ್ಪ ಸೇರಿ ಉಪವಾಸ ಕೈಗೊಂಡಿದ್ದವರಿಗೆ
101 ಎಡೆ ಸಮರ್ಪಿಸಲಾಯಿತು. ದೇವರ ಬಸವನಿಗೆ ನೈವೇದ್ಯ ಅರ್ಪಿಸುವ ಮೂಲಕ ಪರೇವು
ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ದೇವರ
ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು.
ಅನಾದಿಕಾಲದಿಂದಲೂ ಮಳೆಗಾಗಿ ಪ್ರಾರ್ಥಿಸಿ ಸೊಲ್ಲಾಪುರದ ಶ್ರೀ ಗುರು ಸಿದ್ಧರಾಮೇಶ್ವರ
ಸ್ವಾಮಿಯವರ ಪರೇವು ನಡೆಸುವ ಪದ್ಧತಿ ಇದೆ. ನೂರಾರು ಭಕ್ತರ ಸಹಕಾರದಿಂದ ಪರೇವು
ಯಶಸ್ವಿಯಾಗಿ ನಡೆಯುತ್ತ ಬಂದಿದ್ದು, ಈ ಪರಂಪರೆ ಮುಂದುವರಿಯಲಿದೆ ಎಂದು ತಾಲೂಕು
ಶ್ರೀಗುರು ರೇವಣಸಿದ್ದೇಶ್ವರ ಸ್ವಾಮಿ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್ ಹೇಳಿದರು.