

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಕಲ ಜೀವಾತ್ಮರಿಗೂ ಅನ್ವಯವಾಗಬಹುದಾದ ಆಧ್ಯಾತ್ಮ ಚಿಂತನೆಯ ಮೇರು ಮೌಲ್ಯಗಳ ನಿರೂಪಣೆಯೊಂದಿಗೆ ಸಾತ್ವಿಕ ಸತ್ಯ ಶುದ್ಧ ಜೀವನ ವಿಧಾನ ಹೊಂದುವಲ್ಲಿ ಮಾರ್ಗದರ್ಶನ ಮಾಡುವ ಶ್ರೇಷ್ಠ ಶಾಸ್ತ್ರ ಗ್ರಂಥ ಸಿದ್ಧಾಂತ ಶಿಖಾಮಣಿಯು ಮನುಕುಲದ ಮಹಾಬೆಳಕಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದರು.
ತಾಲೂಕಿನ ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಏರ್ಪಡಿಸಿದ್ದ ಧರ್ಮೋತ್ತೇಜಕ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಸಿದ್ಧಾಂತ ಶಿಖಾಮಣಿಯಲ್ಲಿ ಎಲ್ಲೂ ನಿದಿರ್ಷ್ಟವಾಗಿ ವೀರಶೈವರನ್ನಷ್ಟೇ ಕೇಂದ್ರೀಕರಿಸಿ ವಿಷಯ ನಿರೂಪಣೆ ಮಾಡದೆ ಸಕಲರ ಲೇಸನ್ನು ಬಯಸಲಾಗಿದೆ ಎಂದರು.
ಧರ್ಮ, ಜಾತಿ, ಭಾಷೆ, ಪ್ರಾಂತಗಳ ಹೆಸರಿನಲ್ಲಿ ದುಷ್ಟ ಶಕ್ತಿಗಳು ಬದುಕಿನ ಸ್ನೇಹ ಭಾವನೆ ಕಲುಷಿತಗೊಳಿಸುತ್ತಿವೆ. ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಆಲೋಚನೆ ಮಾಡಿ ಹೆಜ್ಜೆ ಹಾಕಬೇಕಿದೆ. ಭಾರತೀಯ ಸಂಸತಿ, ಸಂಸ್ಕಾರ, ಧರ್ಮ ಪರಂಪರೆ, ಆಧ್ಯಾತ್ಮದ ನತೆ ಮರೆಯದೇ ದೇಶಾಭಿಮಾನದಿಂದ ಎಲ್ಲವನ್ನೂ ಸ್ಮರಣೆಯಲ್ಲಿಟ್ಟುಕೊಳ್ಳಬೇಕು ಎಂದರು.
ಸುಳ್ಳದ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮೈಸೂರು ಅರಮನೆ ಜಪದಕಟ್ಟಿಮಠದ ಶ್ರೀಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿದರು. ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯತೆ ವಹಿಸಿದ್ದರು.
ವಿಜಯನಗರ ಜಿಲ್ಲೆ ಹಂಪಸಾಗರ ನವಲಿಹಿರೇಮಠದ ಶ್ರೀ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕಲಬುಗಿರ್ ಜಿಲ್ಲೆ ಬೆಳಗುಂಪಾ ಬೃಹನ್ಮಠದ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿಯ ಶ್ರೀಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಸತ್ತಿಗೇರಿಯ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೇಯಾಂಶ ದೇಸಾಯಿ, ಬಸವರಾಜ ಇಟಗಿ, ಸೋಮಲಿಂಗಶಾಸ್ತ್ರಿ ಗುಡ್ಡದಮಠ ಇತರರು ಇದ್ದರು.
ಗುರುರೆ: ತಾಪಂ ಮಾಜಿ ಸದಸ್ಯ ಸುರೇಂದ್ರ ದೇಸಾಯಿ, ಅಣು ವಿಜ್ಞಾನಿ ಎಸ್.ಆರ್. ಶಿವಯ್ಯನಮಠ, ಎನ್.ಜಿ.ಪಾಟೀಲ, ಬಸಯ್ಯ ಚಿಕ್ಕಮಠ, ಬಸವರಾಜ ಕಲ್ಯಾಣಪುರ, ಬಸವರಾಜ ಹೊಂಗಲಮಠ, ಇಂದುಮತಿ ಸುಣಕದಮಠ, ಲೋಚನಸಿಂಗ್ ಭಾತಖಂಡೆ, ರುದ್ರಮ್ಮ ಗುಡಿ, ಗೂಳಪ್ಪ ಉಂಡೋಡಿ, ಮಂಜುನಾಥ ಲಿಗಾಡೆ ಅವರಿಗೆ ಗುರುರೆ ನೀಡಿ ಆಶೀರ್ವದಿಸಲಾಯಿತು.
ಗುರುಮೂತಿರ್ ಯರಗಂಬಳಿಮಠ ಸ್ವಾಗತಿಸಿದರು.