ಸಿದ್ಧಲಿಂಗೇಶ್ವರ ಮಹಾದ್ವಾರದ ಭೂಮಿಪೂಜೆ ನಾಳೆ

Mahalinga Swamiji
ಮಹಾಲಿಂಗ ಸ್ವಾಮೀಜಿ
Published on

ಸಿಂಧನೂರು: ತಾಲೂಕಿನ ಯದ್ದಲದೊಡ್ಡಿ ಗ್ರಾಮದ ಸುವರ್ಣಗಿರಿ ವಿರಕ್ತಮಠದ ಮುಖ್ಯರಸ್ತೆಯ ಶ್ರೀ ಸಿದ್ಧಲಿಂಗೇಶ್ವರ ಮಹಾದ್ವಾರದ ಭೂಮಿಪೂಜೆ ಕಾರ್ಯಕ್ರಮ ಜು.1ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಮಹಾಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಕನಕಗಿರಿ ಸುವರ್ಣಗಿರಿ ವಿರಕ್ತಮಠದ ಡಾ.ಚನ್ನಮಲ್ಲ ಸ್ವಾಮೀಜಿ, ಚರಣಗಿರಿ ಸಂಸ್ಥಾನಮಠದ ಹಾಲ್ವಿಯ ಅಭಿನವ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಚೀಕಲಪರ್ವಿ ಸದಾಶಿವ ಸ್ವಾಮೀಜಿ, ಅಡವಿ ಅಮರೇಶ್ವರದ ತೋಂಟದಾರ್ಯ ಸ್ವಾಮೀಜಿ, ಕಲ್ಲೂರು ಶಂಭುಲಿಂಗೇಶ್ವರ ಸ್ವಾಮೀಜಿ, ಅಂಕುಶದೊಡ್ಡಿಯ ವಾಮದೇವ ಶಿವಾಚಾರ್ಯರು, ಬಸವಾಶ್ರಮದ ಬಸವ ಭೂಷಣ ಸ್ವಾಮೀಜಿ, ಎಂಎಲ್ಸಿ ಬಸನಗೌಡ ಬಾದರ್ಲಿ, ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಪ್ರಮುಖರಾದ ಕೊಲ್ಲಾ ಶೇಷಗಿರಿರಾವ, ಡಾ.ಆರ್.ಚನ್ನನಗೌಡ ಪಾಟೀಲ್, ಮಾಜಿ ಸಚಿವ ವೆಂಕಟರಾವ ನಾಡಗೌಡ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಕೃಷಿ ಬೆಲೆ ಆಯೋಗ ಮಾಜಿ ಸದಸ್ಯ ಹನುಮನಗೌಡ ಬೆಳಗುರ್ಕಿ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಸಿಎಸ್‌ಎಫ್‌ನ ವಿನಯಕುಮಾರ ಕಾಲೀಕರ್ ಭಾಗವಹಿಸುವರು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net