7ರಿಂದ ಸಿದ್ಧಲಿಂಗ ಮಹಾಂತರ ಸಂಸ್ಮರಣೋತ್ಸವ

ವಾಮದೇವ ಶಿವಾಚಾರ್ಯರು
ವಾಮದೇವ ಶಿವಾಚಾರ್ಯರು
Published on

ಕಂಪ್ಲಿ: ಎಮ್ಮಿಗನೂರಿನ ಶ್ರೀಗುರು ಮಹಾಂತರ ಮಠದಲ್ಲಿ ಜು.7ರಿಂದ 12ರವರೆಗೆ ಶ್ರೀಗುರು ಸಿದ್ಧಲಿಂಗ ಮಹಾಂತರ 24ನೇ ಪುಣ್ಯ ಸಂಸ್ಮರಣೋತ್ಸವ ನಿಮಿತ್ತ ಕಾರ್ಯಕ್ರಮಗಳು ಜರುಗಲಿವೆ. ಜು.7ರಂದು ಬೆಳಗ್ಗೆ ಧರ್ಮ ಧ್ವಜಾರೋಹಣವನ್ನು ತೆಕ್ಕಲಕೋಟೆ ಕಂಬಾಳಿಮಠದ ಶ್ರೀ ವೀರಭದ್ರ ಶಿವಾಚಾರ್ಯರು ನೆರವೇರಿಸಲಿದ್ದಾರೆ. ಸಂಜೆ ಲಿಂ.ಶ್ರೀ ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯರ ಪುರಾಣ ಹಾಗೂ ಸಿದ್ಧಾಂತ ಶಿಖಾಮಣಿ ಪ್ರವಚನ ಆರಂಭಕ್ಕೆ ಬುಕ್ಕಸಾಗರದ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯರು ಚಾಲನೆ ನೀಡಲಿದ್ದಾರೆ. ಮಸ್ಕಿಯ ಶ್ರೀ ವರರುದ್ರಮುನಿ ಶಿವಾಚಾರ್ಯರು ಅಧ್ಯಕ್ಷತೆ ಹಾಗೂ ಹರಪನಹಳ್ಳಿಯ ಶ್ರೀ ವರಸದ್ಯೋಜಾತ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಕೂಡ್ಲಿಗಿ ಪ್ರಶಾಂತಸಾಗರ ಶಿವಾಚಾರ್ಯರಿಂದ ಸಿದ್ಧಾಂತ ಶಿಖಾಮಣಿ ಪ್ರವಚನ, ಬಸವನ ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರಿಂದ ಪುರಾಣ ಪ್ರವಚನ, ತಾಳಿಕೋಟೆಯ ಪರಶುರಾಮ ಚಟ್ನಳ್ಳಿ ಅವರು ಸಂಗೀತ, ಯಲ್ಲಪ್ಪ ಗುಂಡಳಿ ಅವರು ತಬಲ ಸೇವೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಗಣ್ಯರು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net