

ತುಮಕೂರು: ಸಿದ್ದಲಿಂಗೇಶ್ವ ಜಾತ್ರಾ ಮಹೋತ್ಸವ ಪ್ರಯುಕ್ತ ನಗರದ ವಿವಿಧೆಡೆ ಸಿದ್ಧಗಂಗಾಶ್ರೀಗಳು ಭಿಾಟನೆ ಕೈಗೊಂಡರು. ನಗರದ ಮಂಡಿಪೇಟೆ ಹಾಗೂ ಹಲವು ಭಕ್ತರ ಮನೆಗಳಿಗೆ ತೆರಳಿದ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹಾಗೂ ಕಿರಿಯ ಶ್ರೀಗಳಾದ ಸಿದ್ದೇಶ್ವರ ಸ್ವಾಮೀಜಿಗಳು ಪಾದಪೂಜೆ ಸ್ವೀಕರಿದರು. ಈ ಸಂದರ್ಭದಲ್ಲಿ ಭಕ್ತರು, ವರ್ತಕರು, ದವಸ& ಧಾನ್ಯಗಳನ್ನು ಕಾಣಿಕೆ ರೂಪದಲ್ಲಿ ಸಲ್ಲಿಸಿದರು. ೆ.20ರಿಂದ ಮಾ.1ರವರೆಗೆ ಶ್ರೀಮಠದಲ್ಲಿ 10ದಿನ ನಡೆಯಲಿರುವ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಗಳಿಬ್ಬರೂ ಭಿಕ್ಷಾಟನೆ ನಡೆಸಿದರು. ಪ್ರತಿವರ್ಷ ಈ ರೀತಿ ಭಿಕ್ಷಾಟನೆ ಕೈಗೊಳ್ಳುವುದು ವಾಡಿಕೆ. ಪ್ರತ್ಯೇಕವಾಗಿ ಹಿರಿಯ, ಕಿರಿಯ ಶ್ರೀಗಳು ಗುರುವಾರ ಮಂಡಿಪೇಟೆಯಲ್ಲಿ ಭಿಾಟನೆ ನಡೆಸಿದರು. ವರ್ತಕರು ಶ್ರೀಮಠಕ್ಕೆ ತಮ್ಮಿಚ್ಛೆಯಂತೆ ಧನ, ಧಾನ್ಯ ನೀಡಿ ಕೃತಾರ್ಥರಾದರು. ಅಕ್ಕಿ, ರಾಗಿ, ತೊಗರಿಬೇಳೆ, ಬೆಲ್ಲ, ಹುಣಸೇಹಣ್ಣು ಹೀಗೆ ಎಲ್ಲ ರೀತಿಯ ದವಸ ಧಾನ್ಯಗಳು ಶ್ರೀಮಠಕ್ಕೆ ದಾನವಾಗಿ ಹರಿದುಬಂದವು. ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಕೋರಿ ಮಂಜುನಾಥ್, ಡಾ.ಎಸ್.ಪರಮೇಶ್ ಶ್ರೀಗಳ ಜತೆ ತೆರಳಿದ್ದರು.