ಶಿವಕುಮಾರ ಸ್ವಾಮೀಜಿ ಮಹಾನ್ ಸಂತ

0104YADAGIRI 08
Published on

ಬಿಇಒ ಬಸವರಾಜ ಅಭಿಮತ | ಯಾದಗಿರಿಯಲ್ಲಿ ಗುರುವಂದನಾ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಶ್ರೀ ಸಿದ್ಧಗಂಗಾ ಮಠದ ತ್ರೀವಿಧ ದಾಸೋಹಿ ಶ್ರೀ ಡಾ.ಶಿವಕುಮಾರ ಮಹಾ ಶಿವಯೋಗಿಗಳು ಒಬ್ಬ ಮಹಾನ್ ಸಂತರಾಗಿದ್ದಾರೆ ಎಂದು ಬಿಇಒ ಬಸವರಾಜ ಶೆಟ್ಟಿ ಹೇಳಿದರು.
ನಗರದ ದಿ.ತಿಮ್ಮಣ್ಣ ಹೇಡಿಗಿಮದ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡ ಕರ್ನಾಟಕ ರತ್ನ ಡಾ.ಶಿವಕುಮಾರ ಮಹಾಶಿವಯೋಗಿಗಳ ೧೧೭ನೇ ಗುರುವಂದನಾ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಶಿವಕುಮಾರ ಶಿವಯೋಗಿಗಳು ನೆಲೆಸಿದ ನೆಲೆಸಿದ ಈ ಪುಣ್ಯ ಭೂಮಿಯಲ್ಲಿ ನಾವು ಜೀವಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಬಡಮಕ್ಕಳ ಏಳಿಗೆಗಾಗಿ ಇಡೀ ತಮ್ಮ ಜೀವನವನ್ನೆ ಸವೆಸಿದ ಮಹಾಪುರುಷರಾಗಿದ್ದಾರೆ ಎಂದರು. ಬಡ ಮಕ್ಕಳ ವಿದ್ಯಾಭ್ಯಾಸ, ಊಟ, ವಸತಿಯ ಜವಾಬ್ದಾರಿ ನೋಡಿಕೊಳ್ಳುವ ಮೊದಲ ಮಠ ಎಂಬ ಕೀರ್ತಿಗೆ ಸಿದ್ದಗಂಗಾ ಮಠಕ್ಕಿದೆ. ಶ್ರೀಗಳ ಈ ನಿಸ್ವಾರ್ಥ ಸೇವೆ ಅನನ್ಯಹವಾಗಿದೆ ಎಂದರು.
ಈ ವೇಳೆ ಶ್ರೀನಿವಾಸ ಕರ್ಲಿ, ವಿನೋದ್ ಬಂಡಿಮನಿ, ಮುಖ್ಯಗುರು ಪುಷ್ಪಾಂನಜಲಿ, ಶಿಕ್ಷಕರಾದ ಸಾನಿಯ, ಮಲ್ಲಿಕಾರ್ಜುನ, ಪವನಕಲ್ಯಾಣ್, ಮಲ್ಲೇಶ ನಾಯಕ, ಅಶ್ವಥಿ, ಆಶೀತಾ, ನಾಗೇಶ್ವರಿ ಪ್ರತಿಭಾ, ರಾಜೇಶ್ವರಿ, ನಿಂಗಮ್ಮ, ತಾಹಿಮ್ಮಿನಾ, ಸಚಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net