ಕೊಳ್ಳೇಗಾಲಕ್ಕೆ ಸಿದ್ಧಗಂಗಾಶ್ರೀ ಭೇಟಿ

29-KGLPHOTO-3,,
ಕೊಳ್ಳೇಗಾಲ ಪಟ್ಟಣಕ್ಕೆ ಸೋಮವಾರ ಆಗಮಿಸಿದ್ದ ತುಮಕೂರಿನ ಸಿದ್ಧಗಂಗಾ ಮಠದ ಮಠಾಧೀಶ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ತಾಲೂಕು ವೀರಶೈವ-ಲಿಂಗಾಯತ ಸಮಾಜದ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು.
Published on

ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣಕ್ಕೆ ಸೋಮವಾರ ಆಗಮಿಸಿದ್ದ ತುಮಕೂರಿನ ಸಿದ್ಧಗಂಗಾ ಮಠದ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ತಾಲೂಕು ವೀರಶೈವ-ಲಿಂಗಾಯತ ಸಮಾಜದ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡು ಆಶೀರ್ವಾದ ಪಡೆದರು. ಪಟ್ಟಣದ ತಾಲೂಕು ಪಂಚಾಯಿತಿ ವೃತ್ತದ ಬಳಿ ಜಮಾಯಿಸಿದ್ದ ಮುಖಂಡರು ಸಿದ್ಧಗಂಗಾ ಶ್ರೀಗಳಿಗೆ ಹಾರ ಹಾಕುವ ಮೂಲಕ ಸ್ವಾಗತಿಸಿದರು. ಈ ವೇಳೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಶ್ರೀಗಳ ಆಶೀರ್ವಾದ ಪಡೆದರು. ಸರಗೂರು ಹೊಸ ಮಠದ ಶ್ರೀ ಬಸವರಾಜ ಸ್ವಾಮೀಜಿ, ಕೊಳ್ಳೇಗಾಲದ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಬಸಪ್ಪ ಸ್ವಾಮೀಜಿ, ಹಂಗ್ರಪುರದ ಮಠದ ಶ್ರೀ ಬಸವಲಿಂಗ ದೇಶಿಕೇಂದ್ರ ಸಾಮೀಜಿ, ಮುಖಂಡರಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕ ವೀರಭದ್ರಸ್ವಾಮಿ, ಲೋಕೇಶ್ ಶಿವಪುರ, ಮಲ್ಲೇಶಪ್ಪ, ತೇರಂಬಳ್ಳಿ ರವಿ, ನಂಜಪ್ಪ, ಜಗದೀಶ್, ಲೋಕೇಶ್ ಬಿಂದು, ಷಣ್ಮುಗ, ಮಹೇಶ್ ಕೆಂಪನಪಾಳ್ಯ, ಲೋಕೇಶ್, ನಂದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net