ನಗರದಲ್ಲಿ ಸಿದ್ಧಚಕ್ರ ಆರಾಧನಾ ಮಹೋತ್ಸವ: ದಿಗಂಬರ ಜೈನ ಬಸದಿ ವತಿಯಿಂದ ಆಯೋಜನೆ

Siddha Chakra Aradhana Mahotsava Mandya
Published on

ಮಂಡ್ಯ: ನಗರದ ಅನಂತನಾಥಸ್ವಾಮಿ ದಿಗಂಬರ ಜೈನ ಬಸದಿ ವತಿಯಿಂದ ಎಂಟು ದಿನ ನಡೆಯಲಿರುವ ಬೃಹತ್ ಸಿದ್ಧಚಕ್ರ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ದೇವಾಲಯದ ಅರ್ಚಕ ಪಾರ್ಶ್ವನಾಥ ಇಂದ್ರ ಮಾತನಾಡಿ, ಎಂಟು ದಿನಗಳ ಕಾಲ ನಡೆಯುವ ಸಿದ್ಧಚಕ್ರ ಆರಾಧನಾ ಮಹೋತ್ಸವವನ್ನು ಹಿಂದೆ ಜೈನ ಮುನಿಗಳು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಇದನ್ನು ನಡೆಸಿಕೊಂಡು ಬರುತ್ತಿದ್ದೇವೆ. ಆಷಾಢ ಮಾಸದ ಅಷ್ಟಮಿವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಹಾವೀರರು ಸಿದ್ಧಿಯನ್ನು ಪಡೆದು ಸಿದ್ಧರಾದ ಕಾರಣ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತದೆ. ಈ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಪಾಪಮುಕ್ತರಾಗುವರು ಎಂಬ ನಂಬಿಕೆ ಇದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಜೈನ ಸಮುದಾಯದ ಎಲ್ಲರೂ ಮಂಗಳ ಕಾರ್ಯದಲ್ಲಿ ಪಾಲ್ಗೊಂಡು ತಮ್ಮ ಕೈಲಾದಂತೆ ಪೂಜಾ ಕಾರ್ಯದಲ್ಲಿ ತೊಡಗುತ್ತಾರೆ. ಅನಂತನಾಥ ದೇವಾಲಯ ಸಮಿತಿ, ಮಹಿಳಾ ಸಂಘ, ಜ್ವಾಲಾಮಾಲಿನಿ ಮಹಿಳಾ ಸಂಘ ಸೇರಿದಂತೆ ಹಲವು ಸಂಘಟನೆಗಳು ಸೇರಿ ಈ ಮಹೋತ್ಸವವನ್ನು ನಡೆಸುತ್ತಿದ್ದು, ನಿತ್ಯವೂ ದೇವಾಲಯದಲ್ಲಿ ವಿಶೇಷ ಪೂಜಾ ಕರ‌್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖಂಡರಾದ ಎಂ.ಜೆ.ನಾಗರಾಜು, ಶ್ರೀಧರ್, ಲೋಕೇಶ್, ರಾಕೇಶ್, ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net