ಸಿದ್ದೇಶ್ವರಸ್ವಾಮಿ ಹುಣ್ಣಿಮೆ ಮಹೋತ್ಸವ ನಾಳೆ

leopard-1
Published on

ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಯಾದಾಪುರ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಹುಣ್ಣಿಮೆ ಮಹೋತ್ಸವ ಜೂ.22ರಂದು ಶನಿವಾರ ನಡೆಯಲಿದೆ.

ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಕೆಲವರು ಜೂ.21ರ ಶುಕ್ರವಾರ ಹುಣ್ಣಿಮೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಭಕ್ತರು ವದಂತಿಗಳಿಗೆ ಕಿವಿಗೊಡಬಾರದು. ಶ್ರೀ ಕ್ಷೇತ್ರದಲ್ಲಿ ಪೂರ್ವನಿಗದಿಯಂತೆ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ. ಮುರಂಡಿ ಗ್ರಾಮಸ್ಥರು ಹಾಗೂ ದೇವಾಲಯ ಸಮಿತಿ ವತಿಯಿಂದ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಟ್ರಸ್ಟ್‌ನ ನಿರ್ದೇಶಕ ಸಿಂಗಟಗೆರೆ ರಾಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net