

ಉಡುಪಿ : ಜ್ಞಾನ ಯೋಗ ಆಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಪರಂಧಾಮ ಸೇರಿದ ವಿಷಯ ತಿಳಿದು ವಿಷಾದವಾಗಿದೆ. ವೈಕುಂಠ ಏಕಾದಶಿ ಪರ್ವದಿನ ಅವರ ದೇಹಾಂತ್ಯ ವಾಗಿರುವುದು ಜೀವನ ಸಾರ್ಥಕ್ಯಕ್ಕೆ ಕನ್ನಡಿಯಂತಿದೆ ಎಂದು ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸರಳತೆಗೆ ಪರ್ಯಾಯ ಎಂಬಂತಿದ್ದ ಶ್ರೀಗಳು, ಆಡಂಬರದ ಸ್ಪರ್ಶವಿಲ್ಲದೇ ವಿರಕ್ತ ಜೀವನ ನಡೆಸುವವರಿಗೆ ಮಾದರಿಯಾದವರು. ತಮ್ಮ ಸೇವಾ ಕಾರ್ಯಗಳು ಹಾಗೂ ಮಾರ್ಗದರ್ಶನಗಳ ಮೂಲಕ ಅಸಂಖ್ಯ ಜನರ ದುಃಖ ದುಮ್ಮಾನಗಳಿಗೆ ಸಾಂತ್ವನ ಸಮಾಧಾನವನ್ನು ನೀಡುತ್ತಾ ದಾರಿಗೆ ಬೆಳಕಾದವರು . ಋಷಿ ಪರಂಪರೆಯ ಒಂದು ಅಮೂಲ್ಯ ಕೊಂಡಿ ಕಳಚಿರುವುದಕ್ಕೆ ತೀವ್ರ ವಿಷಾದವಾಗಿದೆ . ಶ್ರೀಸಿದ್ಧೇಶ್ವರ ಸ್ವಾಮೀಜಿಯವರ ಆತ್ಮಕ್ಕೆ ಶ್ರೀಕೃಷ್ಣನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.