ಕಾರ್ಯ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮಿ ತೆಪ್ಪೋತ್ಸವ

ನಂಜನಗೂಡು ತಾಲೂಕಿನ ಕಾರ್ಯ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮಿಯ ತೆಪ್ಪೋತ್ಸವ ಮತ್ತು ಪಂಚ ದೇವರುಗಳ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ನಂಜನಗೂಡು ತಾಲೂಕಿನ ಕಾರ್ಯ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮಿಯ ತೆಪ್ಪೋತ್ಸವ ಮತ್ತು ಪಂಚ ದೇವರುಗಳ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
Published on

ನಂಜನಗೂಡು: ಇತಿಹಾಸ ಪ್ರಸಿದ್ಧ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ತಾಲೂಕಿನ ಕವಲಂದೆ ಹೋಬಳಿಯ ಕಾರ್ಯ ಗ್ರಾಮದಲ್ಲಿ ಬುಧವಾರ ಸಿದ್ದೇಶ್ವರಸ್ವಾಮಿಯ ತೆಪ್ಪೋತ್ಸವ ಮತ್ತು ಪಂಚ ದೇವರುಗಳ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದ ಮಠದ ಆವರಣದಲ್ಲಿ ಬಸವೇಶ್ವರ, ಚೆನ್ನಗಮಾದಣ್ಣ, ನಾಗಮ್ಮ ದೇವಿ, ತೋಪಿನ ಮಲ್ಲಿಕಾರ್ಜುನಸ್ವಾಮಿ ಹಾಗೂ ಸಿದ್ದೇಶ್ವರ ಸ್ವಾಮಿಯನ್ನು ಹೂವಿನಿಂದ ಅಲಂಕಾರ ಮಾಡಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯದೊಂದಿಗೆ ಪಂಚದೇವರುಗಳನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮುಂಜಾನೆ ನಾಲ್ಕು ಗಂಟೆಗೆ ಗ್ರಾಮಲ್ಲಿರುವ ಕೆರೆಯಲ್ಲಿ ಸಿದ್ದೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತಗೊಂಡಿದ್ದ ತೇಲುವ ದೋಣಿಯಲ್ಲಿ ಕುಳ್ಳಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪೂರ್ವ ಮತ್ತು ಪಶ್ಚಿಮವಾಗಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ತೆಪ್ಪೋತ್ಸವ ನಡೆಸಲಾಯಿತು. ಈ ಸಂದರ್ಭ ಕೆರೆಯ ದಡದಲ್ಲಿದ್ದ ಸಾವಿರಾರು ಭಕ್ತರು ಜಯಘೋಷ ಕೂಗಿದರು. ಬಾನಂಗಳದಲ್ಲಿ ಬಣ್ಣ ಬಣ್ಣದ ಆಕರ್ಷಕ ಚಿತ್ತಾರದ ಪಟಾಕಿಗಳನ್ನು ಸಿಡಿಸಿ ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಾ.ಪು ಸಿದ್ದವೀರಪ್ಪ, ಗ್ರಾಪಂ ಸದಸ್ಯರಾದ ರಾಜೇಶ್ವರಿ ಗುರುಸ್ವಾಮಿ, ಸರೋಜಮ್ಮ ಸಿದ್ದಯ್ಯಸ್ವಾಮಿ, ಪಾರ್ವತಮ್ಮ, ಜೋಗನಾಯಕ, ಶೋಭಾ, ಮಹದೇವಮ್ಮ ಗ್ರಾಮದ ಯಜಮಾನರಾದ ಪಟೇಲ್ ಸಿದ್ದರಾಜು, ಕುಮಾರ್, ಶಿವಲಿಂಗಯ್ಯ, ಮರಿಸ್ವಾಮಿನಾಯಕ, ರವಿಕುಮಾರ್, ಸಿದ್ದನಾಯಕ, ಮುಖಂಡರಾದ ಸಿದ್ದಯ್ಯಸ್ವಾಮಿ, ಜಯಶಂಕರ್, ಮಾದೇಗೌಡ, ಕಾರ್ಯ ಬಸವಣ್ಣ, ಗುರುಸ್ವಾಮಿ, ಯೋಗೇಂದ್ರ, ಚೇತು, ಸೋಮಣ್ಣ ನಾಯಕ, ಕೆಂಪರಾಜು, ಪುಟ್ಟಬುದ್ದಿ, ಚಿನ್ನಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net