

ಹುಬ್ಬಳ್ಳಿ: ಇಲ್ಲಿಯ ನವನಗರದ ಚಿಕೇನಕೊಪ್ಪ ಚನ್ನವಿರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸತ್ಸಂಗ ಹಾಗೂ ದಾಸೋಹ ಸೇವಾ ಸಮಿತಿ ವತಿಯಿಂದ "ಶ್ರದ್ದಾಸ್ಮರಣೆ' ಅಧ್ಯಾತ್ಮ ಪ್ರವಚನ ಡಿ. 29ರಿಂದ ಜನೆವರಿ 2ರ ವರೆಗೆ ಏರ್ಪಡಿಸಲಾಗಿದೆ.
ವಿಜಯಪುರ ಶ್ರೀಗೌರಿಶಂಕರ ಬಿಲ್ವಾಶ್ರಮದ, ಪ್ರವಚನ ಪ್ರವಿಣ ಶ್ರೀ ಸಿದ್ದಲಿಂಗ ದೇವರು ನಿತ್ಯ ಸಂಜೆ 6ಕ್ಕೆ ಪ್ರವಚನ ನೀಡುವರು.
ಡಿ. 29ರಂದು ಸಂಜೆ ನಡೆಯುವ ಉದ್ಘಾಟನೆ ಸಮಾರಂಭದ ಸಾನ್ನಿಧ್ಯವನ್ನು ಮೂರುಸಾವಿರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ, ಬಳಗಾನೂರು ಕ್ಷೇತ್ರದ ಶ್ರೀ ಶಿವಶಾಂತವೀರ ಶರಣರು ವಹಿಸುವರು.
ಜನೆವರಿ 2ರಂದು ಸಂಜೆ ಪ್ರವಚನ ಮಂಗಲ ಕಾರ್ಯಕ್ರಮ ನಡೆಯಲಿದ್ದು, ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಜಿ ಸಾನ್ನಿಧ್ಯ ವಹಿಸುವರು. ನಂತರ ಮಹಾಪ್ರಸಾದ ವಿತರಣೆ ನಡೆಯಲಿದೆ.