

ವಿಜಯವಾಣಿ ಸುದ್ದಿಜಾಲ ಗದಗ
ನಗರದ ವಿದ್ಯಾದಾನ ಶಿಕ್ಷಣ ಸಮಿತಿಯಲ್ಲಿ ಶುಕ್ರವಾರ ಸಿದ್ದೇಶ್ವರ ಶ್ರೀಗಳ ದ್ವೀತಿಯ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.
ಸಿದ್ದೇಶ್ವರ ಶ್ರೀಗಳು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸಂಸ್ಥೆಯ ಕಾರ್ಯದಶಿರ್ ಶ್ರೀನಿವಾಸ ಹುಯಿಲಗೋಳ, ಸಿದ್ದೇಶ್ವರ ಶ್ರೀಗಳು ಜೇಬಿಲ್ಲದ ಖಾದಿ ತೊಟ್ಟಿರುವ ಸಂತರು. " ಎಂದು ಸ್ಮರಿಸಿದರು. ಅದ್ವೀತಿಯ ಬದುಕು, ಸರಳತೆ, ಸಮಯಪಾಲನೆ ಮತ್ತು ಅವರ ಆದರ್ಶಗಳನ್ನು ಮಕ್ಕಳು ಅಳವಡಿಕೊಳ್ಳಬೇಕು ಎಂದರು.
ಡಾ. ಗಂಗೂಬಾಯಿ ಪವಾರ, ವಿ. ಪಿ. ಪಾಟೀಲ, ಎನ್. ಜಿ. ಚನ್ನಪ್ಪಗೌಡ್ರ, ಬಸವರಾಜ ಕರಬಿಷ್ಠಿ, ಶಶಿಧರ ಹೊಸಳ್ಳಿ, ಎಸ್. ವೈ. ಕಠಾರಿ ಇತರರು ಇದ್ದರು.