ಸಿದ್ಧಾರೂಢ ಮಠದಲ್ಲಿ 22 ಲಕ್ಷ ಕಾಣಿಕೆ ಸಂಗ್ರಹ

Published on

ಹುಬ್ಬಳ್ಳಿ: ಇಲ್ಲಿಯ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಮತ್ತು ಸಿಬ್ಬಂದಿ ಹಾಗೂ ಭಕ್ತರ ಸಮ್ಮುಖದಲ್ಲಿ ತೆರೆದು ಎಣಿಕೆ ಮಾಡಲಾಗಿದ್ದು, 22,10,643 (22.10 ಲಕ್ಷ ರೂ.) ಸಂಗ್ರಹವಾಗಿದೆ.

16,973 ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಗ್ರಿಗಳು ಸಂಗ್ರಹವಾಗಿವೆ. ಅಕ್ಟೋವರ್ 23 ರಿಂದ ನ. 20ರ ವರೆಗಿನ 27 ದಿನಗಳಲ್ಲಿ ಕಾಣಿಕೆ ಇದಾಗಿದೆ.

ಟ್ರಸ್ಟ್ ಕಮೀಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಉದಯಕುಮಾರ ನಾಯ್ಕ, ವಿ.ವಿ. ಮಲ್ಲಾಪೂರ, ವಸಂತ ಸಾಲಗಟ್ಟಿ, ಬಾಳು ಮಗಜಿಕೊಂಡಿ, ಜಯಶ್ರೀ ಕಂಚಿ ಹಾಗೂ ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net