ಸೇವೆಗೈದ ಕಲಾವಿದರ ವಿವರ ನೀಡಲು ಸಿದ್ಧಾರೂಢ ಮಠ ಕಮಿಟಿ ಮನವಿ

IMG_20250105_210345_14-1.jpg
Published on

ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಸೇವೆಗೈದ ಕಲಾವಿದರಿಗೆ ಸತ್ಕಾರ ನೀಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸಂಪರ್ಕ ವಿವರ ನೀಡುವಂತೆ ಶ್ರೀಮಠದವರು ಕಲಾವಿದರಲ್ಲಿ ಕೋರಿದ್ದಾರೆ.

ಜಗದ್ಗುರು ಸಿದ್ಧಾರೂಢರ 190ನೇ ಜಯಂತ್ಯುತ್ಸವ ಹಾಗೂ ಜಗದ್ಗುರು ಶ್ರೀ ಗುರುನಾಥಾರೂಢರ 115ನೇ ಜಯಂತ್ಯುತ್ಸವ, ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ನಿಮಿತ್ತ ಫೆಬ್ರವರಿ 20ರಿಂದ 26ರ ವರೆಗೆ ಹಮ್ಮಿಕೊಳ್ಳುವ ವಿಶ್ವ ವೇದಾಂತ ಪರಿಷತ್ ಕಾರ್ಯಕ್ರಮದ ಅಂಗವಾಗಿ ಇಲ್ಲಿಯ ವರೆಗೆ ಸದ್ಗುರು ಸಿದ್ಧಾರೂಢ ಸ್ವಾಮಿಯವರನ್ನು ಕುರಿತು ಭಕ್ತೀಗಿತೆಗಳನ್ನು ನಿರ್ಮಿಸಿ ಪ್ರಸಾರ ಮಾಡಿರುವ ಅಡಿಯೋ/ವಿಡಿಯೋ ಧ್ವನಿ ಸುರಳಿ ತಯಾರಕರ ಭಕ್ತಿ ಗೀತೆ, ಸಾಹಿತ್ಯ ರಚನಾಕಾರರು, ಧ್ವನಿ ನೀಡಿದ ಹಿನ್ನೆಲೆ ಗಾಯಕರು ಮತ್ತು ಸಂಗೀತ ಸಂಯೋಜಕರು ಅಲ್ಲದೆ ಸಹಕರಿಸಿರುವ ಸಹ ಕಲಾವಿದರನ್ನು ಸತ್ಕರಿಸಲು ಶ್ರೀಮಠದ ಟ್ರಸ್ಟ್ ಕಮೀಟಿ ನಿರ್ಧರಿಸಿದೆ.

ಹಾಗಾಗಿ ಸಂಬಂಧಿಸಿದ ಕಲಾವಿದರು ತಮ್ಮ ಸಂಪರ್ಕ ವಿಳಾಸವನ್ನು ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್ಮನ್, ವಿಶ್ವವೇದಾಂತ ಪರಿಷತ್, ಸಂಗೀತ ಸಮಿತಿಯವರಿಗೆ ನೀಡಲು ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net