ಸಿದ್ಧಾರೂಢಮಠದಲ್ಲಿ ನಿಜಗುಣಶಿವಯೋಗಿಗಳ ಜಯಂತ್ಯುತ್ಸವ

Published on

ಹುಬ್ಬಳ್ಳಿ: ಇಲ್ಲಿಯ ಶ್ರೀಸಿದ್ಧಾರೂಢ ಸ್ವಾಮಿ ಮಠದಲ್ಲಿ ಶ್ರೀ ನಿಜಗುಣಶಿವಯೋಗಿಗಳ ಜಯಂತಿ ಅಂಗವಾಗಿ ಬುಧವಾರ ಕೈಲಾಸ ಮಂಟಪದಲ್ಲಿ ಮಹಾತ್ಮರಿಂದ ಪ್ರವಚನ ನೆರವೇರಿತು.

"ನಂಬು ಜ್ಞಾನವನೆ ಕರ್ಮವೆಂಬ ಜಾಲದೊಳು ಸಿಲ್ಕಿ' ವಿಷಯ ಕುರಿತು ಉಪನ್ಯಾಸ ನೀಡಲಾಯಿತು.

ದೇವರಹುಬ್ಬಳ್ಳಿ ಸಿದ್ಧಾಶ್ರಮದ ಶ್ರೀ ಸಿದ್ದಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಅಣ್ಣಿಗೇರಿಯ ಡಾ. ಶಿವಕುಮಾರೇಶ್ವರ ಸ್ವಾಮೀಜಿ, ದುಃಖಕ್ಕೆ ಮೂಲ ಕಾರಣ ಅಜ್ಞಾನ. ಯಾವುದನ್ನು ನಂಬಬಾರದಾಗಿತ್ತು ಅದನ್ನು ನಂಬಿ ಕರ್ಮವನ್ನು ಮಾಡುತ್ತ ಅದರಲ್ಲೇ ಕುಳಿತಿದ್ದೇವೆ, ಭೂಮಿ, ಹೇಮಾ, ಕಾಮಿನಿ ಇವು ಯಾವುದೂ ನಿನ್ನದಲ್ಲ. ನೀನು ಜ್ಞಾನ ರತ್ನವನ್ನು ಮರೆತುಬಿಟ್ಟಿರುವಿ, ನೀನು ಬ್ರಹ್ಮ ಸ್ವರೂಪನಾಗಿರುವೆ ಎನ್ನುವುದನ್ನು ಮರೆತು ವಿಹಿತ ಕರ್ಮವನ್ನು ಮಾಡುತ್ತಾ ಕುಳಿತಿರುವಿ, ಆದರೆ ಈ ಕರ್ಮಗಳಿಂದ ಮುಕ್ತಿಯಾಗುವುದಿಲ್ಲ, ನೀನು ಗುರು ಸೇವೆ ಮಾಡಿ ಶ್ರವಣ, ಮನನ, ನಿಧಿದ್ಯಾಸನಗಳನ್ನು ಮಾಡಿ ಜ್ಞಾನವನ್ನು ಪಡೆದುಕೊಂಡರೆ ಮುಕ್ತಿಯ ಕಡೆಗೆ ಸಾಗುವೆ ಎಂದು ನುಡಿದರು.

ಉಪ್ಪಾರಟ್ಟಿಯ ಶ್ರೀ ನಾಗೇಶ್ವರಭಾರತಿ ಸ್ವಾಮೀಜಿ, ಯಕ್ಕನಳ್ಳಿಯ ಶ್ರೀಕೃಷ್ಣಾನಂದ ಸ್ವಾಮೀಜಿ, ಬೆನಕನಕೊಪ್ಪದ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಶಾಂತಾನಂದಸ್ವಾಮೀಜಿ, ಶ್ರೀಸಿದ್ಧಾನಂದಭಾರತಿ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ಮಾತೋಶ್ರೀ ಲಲಿತಮ್ಮತಾಯಿ, ಡಾ. ಆನಂದ ಸ್ವಾಮೀಜಿ, ಸಿದ್ದನಗೌಡ ಪಾಟೀಲ, ಡಾ. ಗೋವಿಂದ ಮಣ್ಣೂರ, ಎಸ್.ಐ. ಕೋಳಕೂರ, ವ್ಯವಸ್ಥಾಪಕ ಈರಣ್ಣ ತುಪ್ಪದ ಹಾಗೂ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.
ಶ್ರೀಮಠದ ಧರ್ಮದರ್ಶಿ ಉದಯಕುಮಾರ ನಾಯ್ಕ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net