ಸಿದ್ಧಾರೂಢ ಮಠದಲ್ಲಿ ಭಾಗವತ ಸಪ್ತಾಹ,  ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ

IMG-20251105-WA0029.jpg
Published on

ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಏರ್ಪಡಿಸಿದ್ದ ಭಾಗವತ ಸಪ್ತಾಹ ಅಂಗವಾಗಿ ಬುಧವಾರ ಸಂಜೆ ಗೋಪಾಳಕಾಳ ನಿಮಿತ್ತ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಚೆನ್ನವೀರ ಮುಂಗುರವಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ಮಠದ ಸಂಸ್ಕೃತ ಪಾಠಶಾಲೆಯಲ್ಲಿ ಭಾಗವತ್ ಸಪ್ತಾಹದ ಅಂಗವಾಗಿ ನಿತ್ಯ ಬೆಳಗ್ಗೆ ಹಾಗೂ ಮಧ್ಯಾಹ್ನ ಭಾಗವತ ಶಾಸ್ತ್ರವನ್ನು ಶಿವಾನಂದ ಜೋಶಿ ಅವರು ನಡೆಸಿಕೊಟ್ಟರು.

ದಾಸೋಹ ಸೇವೆ ನೆರವೇರಿಸಿದ ನೀಲಮ್ಮ ಗೌಳಿ ಮತ್ತು ಡಂಬರಮತ್ತೂರ ಗ್ರಾಮದ ದಾನಿಗಳನ್ನು ಸನ್ಮಾನಿಸಲಾಯಿತು.
ಶ್ರೀಮಠದ ಗೌರವ ಕಾರ್ಯದರ್ಶಿ ರಮೇಶ ಬೆಳಗಾವಿ, ಧರ್ಮದರ್ಶಿಗಳಾದ ಗೀತಾ ಕಲಬುರ್ಗಿ, ಡಾ. ಗೋವಿಂದ ಮಣ್ಣೂರ, ಮ್ಯಾನೇಜರ ಈರಣ್ಣ ತುಪ್ಪದ ಹಾಗೂ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net