ಸಿದ್ಧಾರೂಢ ಮಠಕ್ಕೆ ಕೆನರಾ ಬ್ಯಾಂಕ್ ನಿಂದ ದೇಣಿಗೆ

IMG_20251002_210859_328.jpg
Published on

ಹುಬ್ಬಳ್ಳಿ: ಇಲ್ಲಿಯ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ಅಡುಗೆ ತಯಾರಿಸಲು ಕೆನರಾ ಬ್ಯಾಂಕ್ ಶಾಖೆಯಿಂದ ಸಿ.ಎಸ್.ಆರ್. ಯೋಜನೆ ಅಡಿಯಲ್ಲಿ ವಿವಿಧ ಸರಕುಗಳನ್ನು ದೇಣಿಗೆ ನೀಡಲಾಯಿತು.

ಸುಮಾರು 8.25 ಲಕ್ಷ ರೂ. ಮೌಲ್ಯದ ಸ್ಟೇನ್ಲೆಸ್ ಸ್ಟೀಲಿನ ಎರಡು ದೊಡ್ಡ ಕುಕ್ಕರ್ ಗಳು ಹಾಗೂ ಬೇಬಿ ಬಾಯ್ಲರ್ ನ್ನು ದೇಣಿಗೆಯಾಗಿ ನೀಡಲಾಯಿತು.

ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ವೀರೇಂದ್ರಬಾಬು ಕೆ., ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಸುಚೇಂದ್ರಕುಮಾರ ವಿಮಲ್ ಹಾಗೂ ಡಿವ್ಹಿಜನಲ್ ಮ್ಯಾನೇಜರ್ ಸಂಜೀವಕುಮಾರ ದೊಮ ಇವರು ಅಡುಗೆ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಿದರು.

ದೇಣಿಗೆ ನೀಡಿದ ಬ್ಯಾಂಕ್ ಅಧಿಕಾರಿಗಳನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷ ಡಿ.ಆರ್. ಪಾಟೀಲ, ಶ್ರೀಮಠದ ಧರ್ಮದರ್ಶಿಗಳಾದ ಉದಯಕುಮಾರ ನಾಯ್ಕ, ಡಾ. ಗೋವಿಂದ ಮಣ್ಣೂರ, ಮಾಜಿ ಧರ್ಮದರ್ಶಿ ಜಿ.ಎಸ್. ನಾಯಕ ಮತ್ತು ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net