ಸಿದ್ಧಾರೂಢ ಮಠದಲ್ಲಿ 30 ಲಕ್ಷ ರೂ. ಕಾಣಿಕೆ ಸಂಗ್ರಹ

IMG_20250105_210345_14-1.jpg
Published on

ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದ ಕಾಣಿಕೆ ಪೆಟ್ಟಿಗೆಗಳನ್ನು ತೆರೆದು ಎಣಿಕೆ ಮಾಡಲಾಗಿದ್ದು, 29,95,487 ರೂ. ಸಂಗ್ರಹವಾಗಿದೆ.

1,42,691 ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಗ್ರಿಗಳು ಸಂಗ್ರಹವಾಗಿವೆ. 2024ರ ಡಿಸೆಂಬರ್ 18ರಿಂದ 27 ದಿನಗಳವರೆಗೆ ಸಂಗ್ರಹವಾದ ಹಣ ಇದಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿದ್ಧಾರೂಢ ನಗರ ಶಾಖೆ ಮ್ಯಾನೇಜರ್ ಮತ್ತು ಸಿಬ್ಬಂದಿ ಹಾಗೂ ಭಕ್ತರ ಸಮ್ಮುಖದಲ್ಲಿ ಎಣಿಕೆ ಮಾಡಲಾಯಿತು.

ಟ್ರಸ್ಟ್ ಕಮಿಟಿಯ ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ವಿನಾಯಕ ಘೋಡಕೆ, ವಿ.ವಿ. ಮಲ್ಲಾಪುರ, ವಸಂತ ಸಾಲಗಟ್ಟಿ, ಗೀತಾ ಕಲಬುರ್ಗಿ, ರಮೇಶ ಬೆಳಗಾವಿ, ಶಾಮಾನಂದ ಪೂಜೇರಿ ಇತರರು ಉಪಸ್ಥಿತರಿದ್ದರು ಎಂದು ಮ್ಯಾನೇಜರ ತುಪ್ಪದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net