

ಹುಬ್ಬಳ್ಳಿ: ಇಲ್ಲಿಯ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಚೇರ್ಮನ್ ಆಗಿ ಚೆನ್ನವೀರ ಡಿ. ಮುಂಗುರವಾಡಿ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿನಾಯಕ ಅ. ಘೋಡ್ಕೆ, ಗೌರವ ಕಾರ್ಯದರ್ಶಿಯಾಗಿ ರಮೇಶ ಎಸ್. ಬೆಳಗಾವಿ ಅವರನ್ನು ಆಯ್ಕೆ ಮಾಡಲಾಗಿದೆ.
ಶ್ರೀಮಠದಲ್ಲಿ ಸೋಮವಾರ ಧರ್ಮದರ್ಶಿ ಕೆ.ಎಲ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇವರ ಅಧಿಕಾರವಧಿ 2026ರ ಏಪ್ರಿಲ್ ಒಂದರ ವರೆಗೆ ಇರುತ್ತದೆ.
ಧರ್ಮದರ್ಶಿಗಳಾದ ಮಂಜುನಾಥ ಮುನವಳ್ಳಿ, ವೀರಪ್ಪ ಮಲ್ಲಾಪುರ, ಡಾ. ಗೋವಿಂದ ಮಣ್ಣೂರ, ಬಾಳು ಮಗಜಿಕೊಂಡಿ, ಉದಯಕುಮಾರ ನಾಯ್ಕ, ಸರ್ವಮಂಗಳಾ ಪಾಠಕ, ಗೀತಾ ಕಲಬುಗಿರ್, ಶಾಮಾನಂದ ಪೂಜೇರಿ, ವಿ.ಡಿ. ಕಾಮರಡ್ಡಿ, ಸಿದ್ದನಗೌಡ ಪಾಟೀಲ, ಅಂದಾನಪ್ಪ ಚಾಕಲಬ್ಬಿ, ವಸಂತ ಸಾಲಗಟ್ಟಿ, ಹಿಂದಿನ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್, ಮ್ಯಾನೇಜರ್ ಈರಣ್ಣ ತುಪ್ಪದ ಉಪಸ್ಥಿತರಿದ್ದರು.