ಸಿದ್ದರಾಮೋತ್ಸವಕ್ಕೆ ಅಭಿಮಾನಿಗಳಿಂದ ಪಾದಯಾತ್ರೆ

IMG-20220728-WA0011.jpg
Published on

ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಕೊಪ್ಪಳದಿಂದ ಅವರ ಅಭಿಮಾನಿಗಳು ಗುರುವಾರ ಪಾದಯಾತ್ರೆ ಆರಂಭಿಸಿದರು.


ಆ.3ರಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರಿಗೆ 75 ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ಅಮೃತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಅವರ ಅಭಿಮಾನಿಗಳು ಕೊಪ್ಪಳದಿಂದ ಪಾದಯಾತ್ರೆ ಮೂಲಕ‌ ತೆರಳಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಳವಂಡಿ, ಮುಂಡರಗಿ, ಹೂವಿನ ಹಡಗಲಿ, ಹರಪನಳ್ಳಿ‌ ಮಾರ್ಗವಾಗಿ ದಾವಣಗೆರೆಗೆ ತೆರಳಲಿದ್ದಾರೆ.


ಈ ಹಿನ್ನೆಲೆಯಲ್ಲಿ‌ ಗುರುವಾರ ಗವಿಮಠಕ್ಕೆ ಭೇಟಿ‌ ನೀಡಿದ ಸಿದ್ದು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಯಾತ್ರೆ ಆರಂಭಿಸಿದರು. ಅಭಿಮಾನಿ ಬಳಗದ ಮುಖಂಡರಾದ ಗುಡದಪ್ಪ ಹಲಗೇರಿ, ಸಂತೋಷ ಕುರಿ, ಮನೋಜ ಮಡ್ಡಿ, ಭರಮಣ್ಣ ಗುರಿಕಾರ, ಚಿದಾನಂದಪ್ಪ ಗುರಿಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net